ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯಿಂದ ಸಾರ್ವಜನಿಕ ತೊಂದರೆಗಳ ಪರಿಹಾರಕ್ಕೆ ಹೊಸ ಐಡಿಯಾ | Oneindia Kannada

Oneindia Kannada 2018-01-03

Views 1.5K

Hassan DC Rohini Sindhuri has strengthened the E Governance in the district by introducing the Public Grievance Redressal System. It enables citizens to easily register and track their complaints/ suggestions.


ಒಂದೇ ಸೂರಿನಡಿ 50ಕ್ಕೂ ಹೆಚ್ಚು ಸರ್ಕಾರಿ ಇಲಾಖೆ/ ಕಚೇರಿಗಳಿಗೆ ಸಂಬಂಧಿಸಿದ ಸಾರ್ವಜನಿಕ ದೂರು/ ಕುಂದುಕೊರತೆಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವೆಬ್ ಪೋರ್ಟಲ್‍ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಚಾಲನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ವೆಬ್ ಪೋರ್ಟಲ್ ಬಳಕೆ ಕುರಿತಂತೆ ಸಾರ್ವಜನಿಕರು ಇನ್ನು ಮುಂದೆ ಅರ್ಜಿ ಹಿಡಿದು ಕಚೇರಿಗೆ ಅಲೆಯುವ, ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ.ಕಂಪ್ಯೂಟರ್/ ಸ್ಮಾರ್ಟ್‍ಫೋನ್ ಬಳಕೆ ಗೊತ್ತಿದ್ದರೆ ಆನ್‍ಲೈನ್ ಮೂಲಕವೂ ದೂರು/ ಕುಂದುಕೊರತೆಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ವೆಬ್ ಪೋರ್ಟಲ್‍ಗೆ 'ಸ್ಪಂದನ' ಎಂದು ಹೆಸರಿಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಸ್ಪಂದನ ವೆಬ್ ಪೋರ್ಟಲ್‍ನ ಆಕರ್ಷಕ ಲೋಗೋ ಮತ್ತು ಟ್ಯಾಗ್ ಲೈನ್ ಸ್ಪರ್ಧೆಯಲ್ಲಿ ಪ್ರಗತಿ ನಗರದ ಚಿತ್ರಕಲಾ ಶಿಕ್ಷಕರಾದ ಕೆ.ಎನ್. ಶಂಕರಪ್ಪ ಅವರು ಆಯ್ಕೆಯಾಗಿದ್ದಾರೆ. ಇವರು ಮಹಾಮಸ್ತಕಾಭಿಷೇಕದ ಹಾಗೂ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋವನ್ನು ಸಿದ್ದಪಡಿಸಿದ್ದಾರೆ.

Share This Video


Download

  
Report form