ದೀಪಕ್ ರಾವ್ ಹತ್ಯೆ ಬಗ್ಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು? | Oneindia Kannada

Oneindia Kannada 2018-01-04

Views 311

Karnataka home minister Ramalinga Reddy reacts about Deepak Rao murder case. I will discuss with CM and Dakshina Kannada district administration about compensation to Deepak family Ramalinga Reddy said in Bengaluru on January 4th.


ಮಂಗಳೂರಿನ ಕಾಟಿಪಳ್ಯದಲ್ಲಿ ನಿನ್ನೆ (ಜನವರಿ 3) ನಡೆದ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, "ದೀಪಕ್ ರಾವ್ ಕೊಲೆ ದುಃಖಕರ ಸಂಗತಿಯಾಗಿದ್ದು, ಈ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಸರ್ಕಾರ ಯಾರ ಪರವು ಇಲ್ಲ ವಿರೋಧವು ಇಲ್ಲ ತಪ್ಪು ಮಾಡಿದರನ್ನು ಶಿಕ್ಷಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.ಪರಿಹಾರದ ಬಗ್ಗೆ ಸಿಎಂ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಜತೆ ಚರ್ಚಿಸಿ ಪರಿಹಾರ ಕೊಡುವುದಾಗಿ ಹೇಳಿದರು. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶವಯಾತ್ರೆಗೆ ಪೊಲೀಸರು ಅವಕಾಶ ನೀಡಿಲ್ಲವೆಂದು ಸಮಜಾಯಿಸಿ ನೀಡಿ ಮಾಧ್ಯಮಗಳ ಮುಂದೆ ಹೆಚ್ಚಿಗೆ ಮಾತನಾಡದೆ ನಡೆದರು.ಅತ್ತ ಮಂಗಳೂರಿನ ಕಾಟಿಪಾಳ್ಯದಲ್ಲಿ ಸ್ಥಳಕ್ಕೆ ಗೃಹ ಸಚಿವರು ಬರಬೇಕು ಕನಿಷ್ಟ 25 ಲಕ್ಷ ರು. ಪರಿಹಾರ ಚೆಕ್ ನೀಡಬೇಕು ಎಂದು ಕಾಟಿಪಳ್ಯದ ಗ್ರಾಮಸ್ಥರು ಸೇರಿದಂತೆ ಅಕ್ಕ-ಪಕ್ಕದ ಸಾರ್ವಜನಿಕರು ಬಿಗಿಪಟ್ಟು ಹಿಡಿದಿದ್ದಾರೆ.

Share This Video


Download

  
Report form
RELATED VIDEOS