ಮಂಗಳೂರು : ದೀಪಕ್ ರಾವ್ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ | Oneindia Kannada

Oneindia Kannada 2018-01-04

Views 546

Chief Minister Siddaramaiah has taken a serious blow to the serial killings in coastal area, including Deepak's murder on Wednesday (January 3) in Kattipalla, Mangaluru. Siddaramaiah discussed with Minister UT Khader and coastal MLA's about serial killings in coastal areas

ಮಂಗಳೂರಿನ ಕಾಟಿಪಳ್ಳದಲ್ಲಿ ಬುಧವಾರ (ಜನವರಿ 3) ನಡೆದ ದೀಪಕ್ ಕೊಲೆ ಸೇರಿದಂತೆ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಭಾಗದ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಸರಣಿ ಕೊಲೆ ಬಗ್ಗೆ ಆ ಭಾಗದ ಸಚಿವ ಯುಟಿ ಖಾದರ್ ಸೇರಿದಂತೆ ಹಲವರ ಜತೆ ಗುರುವಾರ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಸಚಿವ ಯುಟಿ ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡರು.ಪದೇ-ಪದೇ ಇಂತಹ ಘಟನೆಗಳು ನಿಮ್ಮ ಜಿಲ್ಲೆಯಲ್ಲಿ ನಡೆದರೆ ಹೇಗೆ?, ಈ ಬಗ್ಗೆ ಹೈಕಮಾಂಡ್ ವರದಿ ಕೇಳುತ್ತಿದೆ. ಇದೇ ವಿಚಾರವನ್ನು ಚುನಾವಣೆಯಲ್ಲಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಕೋಮುಗಲಭೆ ಭುಗಿಲೇಳಬಾರದು ಎಂದು ಸಿದ್ದರಾಮಯ್ಯ ಅವರು ಯುಟಿ ಖಾದರ್ ಗೆ ಖಡಕ್ ಸೂಚನೆ ನೀಡಿದರು.

Share This Video


Download

  
Report form
RELATED VIDEOS