ಅಂಬರೀಶ್ ಅವರ ನಡೆ ಮಂಡ್ಯ ರಾಜಕೀಯದಲ್ಲಿ ಅಚ್ಚರಿ ಮೂಡಿಸುತ್ತಿದೆ ! | Oneindia Kannada

Oneindia Kannada 2018-01-06

Views 1.4K

ಇದುವರೆಗೆ ತಟಸ್ಥವಾಗಿದ್ದ ಮಾಜಿ ಸಚಿವ, ಶಾಸಕರೂ ಆಗಿರುವ ನಟ ಅಂಬರೀಶ್ ಅವರು ವಿಧಾನಸಭಾ ಚುನಾವಣೆ ಬರುತ್ತಿದ್ದಂತೆಯೇ ಚುರುಕಾಗಿದ್ದಾರೆ. ಇದೀಗ ಮಂಡ್ಯದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದ್ದು ಎಲ್ಲರೂ ಅಚ್ಚರಿಯಿಂದ ನೋಡುವಂತಾಗಿದೆ. ಮಂಡ್ಯದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಅವರನ್ನು ಸಂಪುಟ ಪುನರ್ರಚನೆ ವೇಳೆ ಕೈಬಿಡಲಾಗಿತ್ತು. ಇದರಿಂದ ಮುನಿಸಿಕೊಂಡಿದ್ದ ಅವರು ದೂರವಾಗಿಯೇ ಉಳಿದು ಬಿಟ್ಟಿದ್ದರು. ಸದನಕ್ಕೂ ಹೋಗದೆ, ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸದೆ ತಟಸ್ಥ ಧೋರಣೆಯನ್ನು ತಳೆದು ಬಿಟ್ಟಿದ್ದರು. ಇದು ಕ್ಷೇತ್ರದ ಜನರ ಅಸಮಾಧಾನಕ್ಕೂ ಕಾರಣವಾಗಿತ್ತು.ಆದರೆ ಈಗ ಎಲ್ಲವನ್ನೂ ಕೊಡವಿಕೊಂಡು ಮೇಲೆದ್ದಿರುವ ಅಂಬರೀಶ್ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ.ನಗರಸಭೆ ಆವರಣದಲ್ಲಿ ನಗರಸಭೆ ವತಿಯಿಂದ ನಡೆದ ಅಮೃತ ಭವನ ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಸವಲತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದಿದ್ದಾರೆ.
Speculations about Ambareesh contesting in Mandya for assembly election is taking different turns day by day but recent activities of Ambareesh shows he is interested.

Share This Video


Download

  
Report form
RELATED VIDEOS