ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಸ್ಟಾರ್ ಪುತ್ರನ ಎಂಟ್ರಿ ಆಗುತ್ತಿದೆಯಂತ ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ, ಆ ಸುದ್ದಿ ಅಧಿಕೃತವಾಗಿದೆ. ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದು, ಫಸ್ಟ್ ಲುಕ್ ರಿಲೀಸ್ ಆಗಿದೆ.
ದುನಿಯಾ ವಿಜಯ್ ಅಭಿನಯಿಸಲಿರುವ ಕುಸ್ತಿ ಚಿತ್ರದಲ್ಲಿ ವಿಜಿ ಅವರ ಮಗ ಸಾಮ್ರಾಟ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ನವನಿರ್ದೇಶಕ ಅನಿಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಜನವರಿ 20 ರಂದು ವಿಜಯ್ ಬರ್ತಡೇ ಆಗಿದ್ದು, ಈ ಸಂಭ್ರಮದ ಉಡಗುಗೊರೆಯಾಗಿ ಕುಸ್ತಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಅಂದ್ಹಾಗೆ, ವಿಜಿ ನಾಯಕನಾಗಿರುವ ಈ ಚಿತ್ರವನ್ನ ಸ್ವತಃ ಅವರೇ ನಿರ್ಮಾಣ ಕೂಡ ಮಾಡಲಿದ್ದಾರೆ. ಇದೊಂದು ಕುಸ್ತಿ ಸುತ್ತ ನಡೆಯುವ ಕಥೆಯಾಗಿದ್ದು, ಈ ಪಾತ್ರಕ್ಕೆ ವಿಜಿ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.
Duniya vijay's son has made his entrance to the silver screen . The first look of the movie was released on Vijay's birthday