'ಜಾಕಿ', 'ರೋಮಿಯೋ', 'ವಿಷ್ಣುವರ್ಧನ', 'ಯಾರೇ ಕೂಗಾಡಲಿ', 'ಟೋಪಿವಾಲಾ' 'ಬಚ್ಚನ್' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ಮಲಯಾಳಂ ನಟಿ ಭಾವನಾ ಇದೀಗ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಅದು ಕನ್ನಡ ಚಿತ್ರ ನಿರ್ಮಾಪಕ ನವೀನ್ ಜೊತೆಗೆ.!
ನಟಿ ಭಾವನಾ ಹಾಗೂ ನಿರ್ಮಾಪಕ ನವೀನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತ್ರಿಶೂರ್ ನಲ್ಲಿನ ದೇವಸ್ಥಾನದಲ್ಲಿ ನಿನ್ನೆ (ಜನವರಿ 22) ಭಾವನಾ-ನವೀನ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಬಳಿಕ ತ್ರಿಶೂರ್ ನಲ್ಲಿಯೇ ಇರುವ ನೆಹರು ಕನ್ವೆನ್ಷನ್ ಸೆಂಟರ್ ನಲ್ಲಿ ನವ ಜೋಡಿಯ ಆರತಕ್ಷತೆ ಕಾರ್ಯಕ್ರಮ ಜರುಗಿತು.
ಮಾಲಿವುಡ್ ಲೋಕದ ಗಣ್ಯಾತಿಗಣ್ಯರೇ ಭಾವನಾ-ನವೀನ್ ವಿವಾಹ ಆರತಕ್ಷತೆಗೆ ಸಾಕ್ಷಿ ಆದರು. ಬನ್ನಿ ಹಾಗಾದ್ರೆ, ಯಾರೆಲ್ಲ ನವೀನ್-ಭಾವನಾ ರಿಸೆಪ್ಷನ್ ನಲ್ಲಿ ಭಾಗವಹಿಸಿದ್ರು . ಸ್ಪೆಷಲ್ ಆಗಿ ಡಿಸೈನ್ ಮಾಡಲಾದ ಗೋಲ್ಡನ್ ಬಣ್ಣದ ಲೆಹೆಂಗಾದಲ್ಲಿ ವಧು ಭಾವನಾ ಮಿರಿ ಮಿರಿ ಮಿಂಚಿದರು.
Many Top Celebrities of Mollywood attended Actress Bhavana-Naveen Wedding reception held at Thrissur, Kerala. Take a look at pictures.