ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಕನ್ನಡದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಆಗಿಲಿದೆ. ಕಳೆದ ವರ್ಷದ ಬಹುನಿರೀಕ್ಷಿತ ಸಿನಿಮಾಗಳು ಈ ವರ್ಷ ತೆರೆಗೆ ಬರುತ್ತಿದೆ. ಈ ಚಿತ್ರಗಳ ಪೈಕಿ ಗೆಲುವು ಯಾವ ಚಿತ್ರಕ್ಕೆ ಎನ್ನುವ ಲೆಕ್ಕಾಚಾರ ಇದೀಗ ಶುರುವಾಗಿದೆ.
ಶಿವರಾಜ್ ಕುಮಾರ ನಟನೆಯ 'ಟಗರು', ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಅಭಿನಯದ 'ಪ್ರೇಮಬರಹ', 'ಬಿಗ್ ಬಾಸ್' ಪ್ರಥಮ್ ಅವರ 'ದೇವ್ರಂಧ ಮನುಷ್ಯ' ಹಾಗೂ '3' (ದಂಡುಪಾಳ್ಯ 3) ಈ ನಾಲ್ಕು ಸಿನಿಮಾಗಳು ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾಗಳು ರಿಲೀಸ್ ಆಗುವುದು ಈಗಾಗಲೇ ಫೈನಲ್ ಆಗಿದೆ. ಇವುಗಳ ಜೊತೆಗೆ ಇನ್ನು ಕೆಲವು ಸಿನಿಮಾಗಳು ಫೆಬ್ರವರಿಗೆ ಬಿಡುಗಡೆಯಾಗಲಿದೆ.
ಶಿವಣ್ಣ ನಟನೆಯ 'ಟಗರು' ಸಿನಿಮಾ ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ ಈಗ ಚಿತ್ರಕ್ಕೆ ರಿಲೀಸ್ ಭಾಗ್ಯ ಸಿಕ್ಕಿದೆ. ಅಂದಹಾಗೆ, ಬಿಡುಗಡೆಗೆ ರೆಡಿ ಇರುವ ಈ ನಾಲ್ಕು ಸಿನಿಮಾಗಳ ಒಂದಷ್ಟು ವಿವರ
Kannada new movies 'Dandupalya 3', 'Tagaru', 'Prema Baraha', 'Devrantha Manushya' are releasing in February 2018.