ಎಸ್.ಜಿ.ಪಿಯ ಎಐಜಿಪಿ ಸೋಮಯತಿರಾಯ್ ನೇತೃತ್ವದ ತಂಡ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್, ಪಾಲಿಕೆ ಅಧಿಕಾರಿಗಳು, ನಗರ ಪೊಲೀಸ್ ಉನ್ನತ ಅಧಿಕಾರಿಗಳು ಸೇರಿ 45 ಮಂದಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ನಗರದ ಹೆಲಿಪ್ಯಾಡ್, ಲಲಿತ ಮಹಲ್, ಜೆ.ಕೆ.ಗ್ರೌಂಡ್ ಹಾಗೂ ಮಹರಾಜಾ ಕಾಲೇಜು ಮೈದಾನದಲ್ಲಿ ಭದ್ರತೆ ಪರಿಶೀಲನೆ ನಡೆಸಿದ ತಂಡ ವರದಿ ಮಾಡಿಕೊಂಡಿತು. ಎಸ್.ಜಿ.ಪಿ ತಂಡವು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಭದ್ರತೆ ರೂಪುರೇಷೆ ಚರ್ಚಿಸಿದತು.