2013ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಬಿಜೆಪಿ ಅಭ್ಯರ್ಥಿ ಜಗದೀಶ್ ಕುಮಾರ್ ಅವರು ಅಕಾಲಿಕ ಮರಣಕ್ಕೆ ತುತ್ತಾದ ನಂತರ 2016ರಲ್ಲಿ ಉಪಚುನಾವಣೆ ನಡೆದು, ಬಿಜೆಪಿಯ ಡಾ. ವೈ ಎ.ನಾರಾಯಣಸ್ವಾಮಿ ಜಯಭೇರಿ ಬಾರಿಸಿದ್ದರು. ಶಾಸಕರಾಗಿ ಆಯ್ಕೆಯಾಗಿ ಇದ್ದ ಅಲ್ಪ ಸಮಯದಲ್ಲೇ ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎನ್ನುವ ಹೆಗ್ಗಳಿಕೆಯ ನಾರಾಯಣಸ್ವಾಮಿ ಅವರು ಪುನರ್ ಆಯ್ಕೆ ಬಯಸಿದ್ದು, ಕಾಂಗ್ರೆಸ್‌ನಿಂದ ಭೈರತಿ ಸುರೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಜೆಡಿಎಸ್ ನಿಂದ ಹನುಮಂತೇ ಗೌಡ್ರು ಕಣದಲ್ಲಿದ್ದಾರೆ. ಕ್ಷೇತ್ರದ ಸಮಸ್ಯೆ ಮತ್ತು ಪ್ರಸಕ್ತ ಚುನಾವಣೆಯ ಬಗ್ಗೆ ನಾರಾಯಣಸ್ವಾಮಿ, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಂತಿದೆ..