ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಮಾವಳ್ಳಿ ನಿವಾಸಿಯೊಬ್ಬರು, ತಮ್ಮ ಕ್ಷೇತ್ರದಲ್ಲಿ ಕಸದ ಸಮಸ್ಯೆ ಇದೆ. ಸ್ವಚ್ಛತೆ ಇಲ್ಲ. ಇದರ ಜೊತೆಗೆ ನೀರಿನ ಸಮಸ್ಯೆಯು ಇದೆ. ಕೆಲವೊಮ್ಮೆ ಒಂದು ವಾರ ನೀರು ಬರೋಲ್ಲ. ಜೊತೆಗೆ ರಸ್ತೆಯು ಸರಿ ಇಲ್ಲ.ಗಡಿ ಓಡಿಸಲು ಕಷ್ಟವಾಗುತ್ತೆ ಎಂದು ಹೇಳಿದರು.