Speaker Ramesh Kumar warns lightly CM Kumaraswamy on giving more schemes. He said after giving so many schemes and facilities Siddaramaiah sitting in the last seat.
ನಿನ್ನೆ ಬಜೆಟ್ ಮೇಲಿನ ಚರ್ಚೆಗೆ ಸದನದಲ್ಲಿ ಕುಮಾರಸ್ವಾಮಿ ಉತ್ತರಿಸಬೇಕಾದರೆ ರಮೇಶ್ ಕುಮಾರ್ ಅವರ ಹಾಸ್ಯ ಚಟಾಕಿ ಸದನದಲ್ಲಿ ನಗುವಿನ ಅಲೆ ಎಬ್ಬಿಸಿತು. 'ರೈತರ ಸಾಲ ಮನ್ನಾ, ರೈತರಿಗೆ ಪ್ರೋತ್ಸಾಹ ಧನ ಇತರೆ ಇತರೆ ಸೌಲಭ್ಯಗಳನ್ನು ಕೊಡುತ್ತಿದ್ದೇವೆ' ಎಂದು ಕುಮಾರಸ್ವಾಮಿ ಅವರು ಪಟ್ಟಿ ಓದಲು ಪ್ರಾರಂಭಿಸಿದರು. ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, 'ಅತಿಯಾಗಿ ಸೌಲಭ್ಯಗಳನ್ನು ಕೊಡಬೇಡಿ ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ಕೂರಬೇಕಾದೀತು' ಎಂದು ಹಾಸ್ಯ ಮಾಡಿದರು.