ಡಾ ರಾಜ್ ಕುಮಾರ್ ರನ್ನ ಅಪಹರಿಸಿದ ವೀರಪ್ಪನ್ ನ ಕರಾಳ ನೆನಪು | Oneindia Kannada

Oneindia Kannada 2018-09-25

Views 97

July 30, 2000- Amavasya on that day. Kannada icon Rajkumar and others 3 kidnapped by Veerappan from Gajanur. Here is the recap of those 108 days- from the day of kidnap to till his release.

ಜುಲೈ 30, 2000ನೇ ಇಸವಿ. ಅಂದು ಭೀಮನ ಅಮಾವಾಸ್ಯೆ. ತಮ್ಮ 71ನೇ ವಯಸ್ಸಿನಲ್ಲಿ ಇಂಥದ್ದೊಂದು ವಿಚಿತ್ರ ಸನ್ನಿವೇಶ ಎದುರಿಸಬೇಕಾಗಬಹುದು ಎಂಬ ಸಣ್ಣ ಸುಳಿವು ಕೂಡ ಆ ಮಹಾನ್ ನಟನಿಗೆ ಇರಲಿಲ್ಲ. ಗಾಜನೂರಿನ ತಾಳವಾಡಿ ಬಳಿಯ ತೋಟದ ಮನೆಯಿಂದ ರಾಜಕುಮಾರ್ ಮತ್ತು ಇತರ ಮೂವರನ್ನು ವೀರಪ್ಪನ್ ಅಪಹರಿಸಿದ್ದ. ನೂರೆಂಟು ದಿನಗಳ ಕಾಲ ವನವಾಸ ಅನುಭವಿಸಿದ ರಾಜಕುಮಾರ್ ಬಿಡುಗಡೆ ಆದದ್ದು ಹೌದು. ಆದರೆ ಕಾಡು ಮೇಡು ಅಲೆದ ಸುಸ್ತು ಅವರ ದೇಹಾರೋಗ್ಯವನ್ನು ಹಾಳು ಮಾಡಿತ್ತು. ಮಂಡಿ ನೋವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ಮತ್ತೊಮ್ಮೆ ತಮ್ಮ ನೆಚ್ಚಿನ ಊರಿಗೆ ಹೋಗಲಾಗದು ಎಂದು ನೋವು ಪಡುವಂತಾಯಿತು. ಮುಂಚಿನಂತೆ ಆರಾಮವಾಗಿ ಇರಲು ಅವರಿಗೆ ಸಾಧ್ಯವಾಗಲೇ ಇಲ್ಲ.

Share This Video


Download

  
Report form
RELATED VIDEOS