Karnataka By election 2018: Former CM Siddaramaiah questions to Sriramulu. Will Siddaramaiah ask the same question to JDS supremo Deve Gowda and CM HD Kumaraswamy? Siddaramaiah questioned Sriramulu that, before resigning Bellary parliament seat, whether he asked constituency voters permission.
ಐದು ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಬುಧವಾರ (ಅ 31) ಮುಕ್ತಾಯಗೊಂಡಿದೆ. ಇನ್ನೇನು ಮತದಾನದ ಮುನ್ನಾ 48ಗಂಟೆ ಮನೆಮನೆ ಪ್ರಚಾರ. ಪ್ರಮುಖವಾಗಿ ಯಾವ ಪಕ್ಷಗಳಿಗೂ ಬೇಡವಾದ 3 ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುವ ವ್ಯಾಪ್ತಿಯ ಮತದಾರ ಮಾತ್ರ ಮೂರು ಪಕ್ಷಗಳ ಆರೋಪ, ಪ್ರತ್ಯಾರೋಪ ನೋಡಿಕೊಂಡು ಒಳ್ಳೆಯ ಮನೋರಂಜನೆಯನ್ನು ಪಡೆದುಕೊಂಡಿದ್ದಾರೆ. ಜವಾಬ್ದಾರಿ ನಿಭಾಯಿಸಬೇಕಾಗಿರುವವರು, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡುವ ಮುನ್ನ, ಮತದಾರರನ್ನು ಕೇಳಿದ್ದಾರೆಯೇ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಲೋಕಸಭಾ ಚುನಾವಣೆಯ ವೇಳೆ ಅಸೆಂಬ್ಲಿಗೆ, ಹಾಗೆಯೇ ಅಸೆಂಬ್ಲಿ ಚುನಾವಣೆಯ ವೇಳೆ ಲೋಕಸಭೆಗೆ ರಾಜೀನಾಮೆ ನೀಡುವುದು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮಾಮೂಲು. ಶ್ರೀರಾಮುಲು ಪ್ರಶ್ನಿಸುವ ಸಿದ್ದರಾಮಯ್ಯನವರಿಗೆ ಕೆಲವೊಂದು ಪ್ರಶ್ನೆಗಳು..