ಅಪ್ಪ ಚಿತ್ರರಂಗದಲ್ಲಿ ಇದ್ದರೆ, ಅವರ ಮಕ್ಕಳು ಕೂಡ ಅದೇ ಹಾದಿಯಲ್ಲಿ ನಡೆಯುತ್ತಾರೆ. ಎಲ್ಲ ಭಾಷೆಗಳಲ್ಲಿ ಅನೇಕ ಸ್ಟಾರ್ ಗಳ ಮಕ್ಕಳು ತಂದೆ, ತಾಯಿಯಂತೆ ಚಿತ್ರರಂಗಕ್ಕೆ ಪ್ರವೇಶ ಮಾಡಿ ಅದೇ ಸಂಪ್ರದಾಯವನ್ನು ಮುಂದುವರೆಸುತ್ತಾರೆ. ಅಪ್ಪ ದೊಡ್ಡ ನಟ ಆಗಿದ್ದರೂ ದರ್ಶನ್ ತಮ್ಮ ಪರಿಶ್ರಮದಿಂದ ಮೇಲೆ ಬಂದಿದ್ದಾರೆ. ಚಿತ್ರರಂಗದಲ್ಲಿ ನಟರ ಮಕ್ಕಳ ಕಷ್ಟ ಏನು ಎಂಬುದನ್ನು ಅವರು ವಿವರಿಸಿದ್ದಾರೆ.