ಸೊಂಟದ ನೋವು ಇಂದು ಹೆಚ್ಚಿನ ವ್ಯಕ್ತಿಗಳಲ್ಲಿ ಕಾಣಬರುತ್ತಿರುವ ತೊಂದರೆಯಾಗಿದೆ. ಹೆಚ್ಚು ಹೊತ್ತು ಕುಳಿತೇ ಮಾಡುವ ಕೆಲಸಗಳು ಇದಕ್ಕೆ ಪ್ರಮುಖ ಕಾರಣ. ಉಳಿದಂತೆ ಅನಾರೋಗ್ಯಕರ ಆಹಾರ ಸೇವನೆ, ವ್ಯಾಯಾಮದ ಕೊರತೆ, ಕೆಲವು ಕಾಯಿಲೆಗಳು ಮತ್ತು ಔಷಧಿಗಳ ಪ್ರಭಾವ ಮೊದಲಾದವೂ ಈ ನೋವಿಗೆ ಕಾರಣವಾಗಬಹುದು. ಕಾರಣವೇನೇ ಇದ್ದರೂ ನೋವು ಮಾತ್ರ ರೋಗಿಯ ಚಲನೆಯನ್ನೇ ಬಾಧಿಸುತ್ತದೆ. ಈ ನೋವನ್ನು ಶಮನಗೊಳಿಸುವ ಯಾವುದೇ ಆದರೂ ಸರಿ, ಅದನ್ನು ಅನುಸರಿಸುವ ಮನಃಸ್ಥಿತಿಯನ್ನು ರೋಗಿ ಹೊಂದಿರುತ್ತಾರೆ. ಸೊಂಟದ ನೋವಿಗೆ ಔಷಧಿಗಳು ನೀಡುವ ಶಮನಕ್ಕಿಂತಲೂ ನಿಸರ್ಗ ತಾನೇ ಸರಿಪಡಿಸಿಕೊಳ್ಳುವ ಗುಣವೇ ಹೆಚ್ಚು ಫಲಪ್ರದವಾಗಿದೆ. ಈ ಶಕ್ತಿಯನ್ನು ಕೆಲವು ಯೋಗಾಸನಗಳು ಇನ್ನಷ್ಟು ಉತ್ತಮಗೊಳಿಸುತ್ತವೆ.