ಸತ್ಯದ ಕುರಿತು ಮಾನವನ ಹುಟ್ಟಿನೊಂದಿಗೇ ಚರ್ಚೆ ನಡೆದುಕೊಂಡು ಬಂದಿದೆ. ಸತ್ಯವೆಂದರೆ ಏನು? ಅದರ ಸ್ವರೂಪವೇನು? ಸುಳ್ಳು ಮಾತನಾಡದೆ ಇರುವುದು ಸತ್ಯ ಎಂಬುದು ಆಡುವ ಮಾತಿಗೆ ಸಂಬAಧಿಸಿದ್ದು. ಇದನ್ನು ಹೊರತು ಪಡಿಸಿ, ವ್ಯಕ್ತಿ ಸತ್ಯ, ಜಾಗತಿಕ ಸತ್ಯ, ಐತಿಹಾಸಿಕ ಸತ್ಯ ಹೀಗೆ ವಿವಿಧ ರೀತಿಯಿಂದ ಸತ್ಯವನ್ನು ಗುರುತಿಸುವ ಪ್ರಯತ್ನವನ್ನು ಮನುಷ್ಯ ಮಾಡುತ್ತಾನೆ. ಇದು ಲೌಕಿಕ ಸತ್ಯವಾದರೆ, ಅಲೌಕಿಕ ಸತ್ಯವೊಂದು ಬೇರೆಯೇ ಇದೆ. ಕಣ್ಣಿಗೆ ಕಾಣುವ ವಾಸ್ತವವೊಂದೇ ಸತ್ಯ ಎಂಬುದರಿAದ ಹಿಡಿದು, ದೇವನೊಬ್ಬನೇ ಸತ್ಯ ಎನ್ನುವವರೆಗೆ ಸತ್ಯದ ಜಿಜ್ಞಾಸೆ ಬೆಳೆದು ನಿಂತಿದೆ. ಇವೆಲ್ಲವನ್ನೂ ಒಳಗೊಂಡAತೆ ಸತ್ಯದ ಕುರಿತು ಕವಿಯ ವಿಚಾರಧಾರೆ ಈ ಕವನದಲ್ಲಿ ಮೂಡಿಬಂದಿದೆ.