ಐದನೇ ತಲೆಮಾರಿನ ಹೋಂಡಾ ಸಿಟಿ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮುನ್ನ ಪ್ರೀ ಬುಕಿಂಗ್‌ಗಳನ್ನು ಆರಂಭಿಸಲಾಗಿದೆ. ದೇಶಾದ್ಯಂತವಿರುವ ಕಂಪನಿಯ ಶೋರೂಂಗಳಲ್ಲಿ ಬುಕಿಂಗ್‌ಗಳನ್ನು ಆರಂಭಿಸಲಾಗಿದೆ. ಗ್ರಾಹಕರು ಈ ಕಾರ್ ಅನ್ನು ಕಂಪನಿಯ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಸಹ ಬುಕ್ ಮಾಡಬಹುದು.
5,000 ರುಪಾಯಿಗಳನ್ನು ಪಾವತಿಸಿ ಈ ಹೊಸ ಕಾರ್ ಅನ್ನು ಬುಕ್ಕಿಂಗ್ ಮಾಡಬಹುದು. ಹೋಂಡಾ ಕಂಪನಿಯು ಮುಂದಿನ ತಿಂಗಳು ಈ ಹೊಸ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಹೋಂಡಾ ಕಂಪನಿಯು ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಈ ಸೆಡಾನ್ ಕಾರ್ ಅನ್ನು ಉತ್ಪಾದಿಸುತ್ತಿದೆ.
ಕಂಪನಿಯು ಹೊಸ ಕಾರ್ ಅನ್ನು ಬಿಡುಗಡೆಗೊಳಿಸುವ ಮುನ್ನ ಈ ಕಾರಿನ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿದೆ. ಈ ಕಾರಿನ ಇಂಟಿರಿಯರ್ ಹಾಗೂ ಎಕ್ಸ್‌ಟಿರಿಯರ್‌ನಲ್ಲಿ ಹಲವಾರು ಅಪ್‌ಡೇಟ್‌ಗಳನ್ನು ಮಾಡಲಾಗಿದೆ.
ಹೊಸ ತಲೆಮಾರಿನ ಹೋಂಡಾ ಸಿಟಿ ಕಾರಿನ ವಿನ್ಯಾಸವನ್ನು ಜಪಾನಿನ ಕಟಾನಾ ಬ್ಲೇಡ್‌ನಿಂದ ಪಡೆಯಲಾಗಿದೆ.