ಕಿಯಾ ಮೋಟಾರ್ಸ್ ಕಂಪನಿಯು ತನ್ನ ಸೊನೆಟ್ ಕಾಂಪ್ಯಾಕ್ಟ್-ಎಸ್‌ಯುವಿಗಾಗಿ ಪ್ರಿ-ಲಾಂಚ್ ಬುಕ್ಕಿಂಗ್ ಗಳನ್ನು ಆರಂಭಿಸಿದೆ. 25 ಸಾವಿರ ರೂಪಾಯಿಗಳನ್ನು ಪಾವತಿಸಿ ಕಿಯಾ ಸೊನೆಟ್ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಬಹುದು.
ಕಿಯಾ ಮೋಟಾರ್ಸ್ ಇತ್ತೀಚೆಗಷ್ಟೇ ಸಬ್ -4 ಮೀಟರ್ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಸೊನೆಟ್ ಎಸ್‌ಯುವಿಯನ್ನು ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಬಿಡುಗಡೆಗೊಳಿಸಲಾಗುವುದು. ಬಿಡುಗಡೆಯಾದ ಕೂಡಲೇ ಈ ಎಸ್‌ಯುವಿಯ ವಿತರಣೆಯನ್ನು ಆರಂಭಿಸಲಾಗುವುದು.
ಕಿಯಾ ಸೊನೆಟ್ ಎಸ್ ಯುವಿಯನ್ನು ಟೆಕ್-ಲೈನ್ ಹಾಗೂ ಜಿಟಿ-ಲೈನ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.
ಎಂಜಿನ್ ಹಾಗೂ ಫೀಚರ್ ಗಳ ಆಧಾರದ ಮೇಲೆ ಈ ಎರಡೂ ಮಾದರಿಗಳನ್ನು ಹಲವಾರು ವೆರಿಯಂಟ್ ಗಳಲ್ಲಿ ಮಾರಾಟ ಮಾಡಲಾಗುವುದು.