ಎಕ್ಸ್-ಬ್ಲೇಡ್ 160 ಬಿಎಸ್ 6 ಬೈಕ್ ಬಿಡುಗಡೆಗೊಳಿಸಿದ ಹೋಂಡಾ

DriveSpark Kannada 2020-07-10

Views 93

ಹೋಂಡಾ ಮೋಟಾರ್‌ಸೈಕಲ್ಸ್ ಅಂಡ್ ಸ್ಕೂಟರ್ ಇಂಡಿಯಾ ತನ್ನ ಎಕ್ಸ್ ಬ್ಲೇಡ್ ಬಿಎಸ್ 6 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೋಂಡಾ ಎಕ್ಸ್-ಬ್ಲೇಡ್ ಬಿಎಸ್ 6 ಬೈಕ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಮೊದಲ ಮಾದರಿಯೂ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದರೆ, ಎರಡನೇ ಮಾದರಿಯು ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ. ಹೊಸ ಹೋಂಡಾ ಎಕ್ಸ್-ಬ್ಲೇಡ್ ಬಿಎಸ್ 6 ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.05 ಲಕ್ಷಗಳಾಗಿದೆ.

ಈ ಹೊಸ ಬೈಕಿಗಾಗಿ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದ್ದು, ಶೀಘ್ರದಲ್ಲೇ ಈ ಬೈಕಿನ ವಿತರಣೆಯನ್ನು ಆರಂಭಿಸಲಾಗುವುದು.

Share This Video


Download

  
Report form
RELATED VIDEOS