ಕಳೆದ ತಿಂಗಳು, ಬಜಾಜ್ ಆಟೋ ಕಂಪನಿಯ ಔರಂಗಾಬಾದ್ ಉತ್ಪಾದನಾ ಘಟಕದ ಇಬ್ಬರು ಉದ್ಯೋಗಿಗಳು ಕರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಇದೇ ಉತ್ಪಾದನಾ ಘಟಕದಲ್ಲಿದ್ದ ಇತರ 140 ಜನ ಕಾರ್ಮಿಕರು ಸೋಂಕಿಗೆ ಒಳಗಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಬಜಾಜ್ ಆಟೋ ಔರಂಗಾಬಾದ್‌ನ ವಾಲುಜ್ ಉತ್ಪಾದನಾ ಘಟಕದಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಸ್ಥಗಿತಗೊಳಿಸುವ ಸಂದರ್ಭದಲ್ಲಿ ಕಂಪನಿಯು ತನ್ನ ನೌಕರರ ವೇತನವನ್ನು 50%ನಷ್ಟು ಕಡಿತಗೊಳಿಸುವುದಾಗಿ ಪ್ರಕಟಿಸಿದೆ.