ಬಜಾಜ್ ಆಟೋ ತನ್ನ ಜನಪ್ರಿಯ ಪ್ಲಾಟಿನಾ 100 ಪ್ಯಾಸೆಂಜರ್ ಬೈಕ್ ಅನ್ನು ಡಿಸ್ಕ್ ಬ್ರೇಕ್ ಮಾದರಿಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ ಹೊಸ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಈ ಬೈಕ್ ಅನ್ನು ಸದ್ಯಕ್ಕೆ ಪ್ಲಾಟಿನಾ ಕೆಎಸ್ ಹಾಗೂ ಪ್ಲಾಟಿನಾ ಇಎಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕಿಕ್ ಸ್ಟಾರ್ಟ್ ಬೈಕಿನ ಬೆಲೆ ರೂ.49,261ಗಳಾದರೆ ಎಲೆಕ್ಟ್ರಿಕ್ ಸ್ಟಾರ್ಟ್ ಬೈಕಿನ ಬೆಲೆ ರೂ.55,546ಗಳಾಗಿದೆ. ಬಜಾಜ್ ಪ್ಲಾಟಿನಾ ಬೈಕಿನಲ್ಲಿ 102 ಸಿಸಿಯ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ.