ಹ್ಯುಂಡೈ ಇಂಡಿಯಾ ಕಂಪನಿಯು ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮೆಂಟೆನೆನ್ಸ್ ಕ್ಯಾಂಪ್ ಅನ್ನು ಹಮ್ಮಿಕೊಂಡಿದೆ. ಕಂಪನಿಯು ಈ ಕ್ಯಾಂಪ್ ಮೂಲಕ ತನ್ನ ಗ್ರಾಹಕರಿಗೆ ವಾಹನಗಳನ್ನು ಸರ್ವೀಸ್ ಮಾಡಿಸಲು ಆಕರ್ಷಕ ರಿಯಾಯಿತಿ ಹಾಗೂ ಹಲವಾರು ಪ್ರಯೋಜನಗಳನ್ನು ನೀಡುತ್ತಿದೆ.
ಈ ನವರಾತ್ರಿ ಕಾರ್ ಕೇರ್ ಕ್ಯಾಂಪ್ ಅಕ್ಟೋಬರ್ 14ರಿಂದ ಅಕ್ಟೋಬರ್ 22ರವರೆಗೆ ಲಭ್ಯವಿರಲಿದೆ. ಈ ಅವಧಿಯಲ್ಲಿ ಹ್ಯುಂಡೈ ಗ್ರಾಹಕರು ತಮ್ಮ ಹತ್ತಿರದ ಸರ್ವೀಸ್ ಸೆಂಟರಿಗೆ ಭೇಟಿ ನೀಡಿ, ಈ ಸರ್ವೀಸ್ ಕ್ಯಾಂಪ್ ನ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಹ್ಯುಂಡೈ ಕಂಪನಿಯು ಈ ಕ್ಯಾಂಪ್ ನಲ್ಲಿ ರೆಗ್ಯುಲರ್ ಸರ್ವೀಸ್ ಮೇಲೆ 15%ನಷ್ಟು ರಿಯಾಯಿತಿ ನೀಡಲಿದೆ. ಇನ್ನು ರಿಪೇರಿಗಳಿಗಾಗಿ 5 ವರ್ಷಕ್ಕಿಂತ ಹಳೆಯ ವಾಹನಗಳಿಗೆ 15% ಹಾಗೂ 5 ವರ್ಷದ ಒಳಗಿರುವ ವಾಹನಗಳಿಗೆ 5% ರಿಯಾಯಿತಿ ನೀಡಲಿದೆ.