ಹ್ಯುಂಡೈ ಕಂಪನಿಯು ದೇಶದ ವಿವಿಧ ನಗರಗಳಲ್ಲಿರುವ ತನ್ನ ಗ್ರಾಹಕರಿಗಾಗಿ ಪ್ರೀ ದೀಪಾವಳಿ ಸರ್ವೀಸ್ ಕ್ಯಾಂಪ್ ಗಳನ್ನು ಆರಂಭಿಸಿರುವುದಾಗಿ ತಿಳಿಸಿದೆ. ಕಂಪನಿಯು ಈ ಕ್ಯಾಂಪ್ ಮೂಲಕ ತನ್ನ ಗ್ರಾಹಕರಿಗೆ ವಾಹನಗಳ ಸರ್ವೀಸ್ ಮಾಡಿಸಲು ವಿಶೇಷ ಕೊಡುಗೆ ಹಾಗೂ ರಿಯಾಯಿತಿಗಳನ್ನು ನೀಡಲಿದೆ.
ನವೆಂಬರ್ 6ರಂದು ಆರಂಭವಾಗಿರುವ ಈ ಸರ್ವೀಸ್ ಈ ತಿಂಗಳ 12ರವರೆಗೆ ಇರಲಿದೆ. ಈ ಅವಧಿಯಲ್ಲಿ ಗ್ರಾಹಕರು ಕಾರು ಕಸ್ಟಮೈಸ್ ಸೇವೆಗಳ ಮೇಲೆ ರಿಯಾಯಿತಿ ಹಾಗೂ ಕೊಡುಗೆಗಳನ್ನು ಪಡೆಯಬಹುದು.
ಈ ಅವಧಿಯಲ್ಲಿ ಕಾರು ಕಸ್ಟಮೈಸ್ ಸೇವೆಗಳ ಬೆಲೆ ರೂ.263ಗಳಿಂದ ಆರಂಭವಾಗುತ್ತದೆ ಎಂದು ಹೇಳಲಾಗಿದೆ.
ಹ್ಯುಂಡೈ ಇಂಡಿಯಾ ಕಂಪನಿಯ ಪ್ರೀ ದೀಪಾವಳಿ ಸರ್ವೀಸ್ ಕ್ಯಾಂಪ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.