ಮಲ್ಟಿಸ್ಟ್ರಾಡಾ 950 ಎಸ್ ಬಿಎಸ್ 6 ಬೈಕಿನ ಪ್ರೀ ಬುಕ್ಕಿಂಗ್ ಆರಂಭಿಸಿದ ಡುಕಾಟಿ

DriveSpark Kannada 2020-10-27

Views 130

ಡುಕಾಟಿ ಕಂಪನಿಯು ತನ್ನ ಮಲ್ಟಿಸ್ಟ್ರಾಡಾ 950 ಎಸ್ ಬಿಎಸ್ 6 ಬೈಕಿನ ಪ್ರೀ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಈ ಬೈಕ್ ಅನ್ನು ಖರೀದಿಸ ಬಯಸುವವರು ಆನ್‌ಲೈನ್ ಮೂಲಕ ಅಥವಾ ಕಂಪನಿಯ ಡೀಲರ್ ಗಳ ಬಳಿ ರೂ.1 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಬಹುದು.

ಮಲ್ಟಿಸ್ಟ್ರಾಡಾ 950 ಎಸ್ ಬಿಎಸ್ 6 ಬೈಕ್ ನವೆಂಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಬೈಕಿನ ವಿತರಣೆಯನ್ನು ನವೆಂಬರ್ ಮೊದಲ ವಾರದಲ್ಲಿ ಆರಂಭಿಸಲಾಗುವುದು.

ಈ ಬೈಕ್ ಅನ್ನು ಬೆಂಗಳೂರು, ದೆಹಲಿ-ಎನ್‌ಸಿಆರ್, ಮುಂಬೈ, ಪುಣೆ, ಅಹಮದಾಬಾದ್, ಕೊಚ್ಚಿ, ಹೈದರಾಬಾದ್, ಕೋಲ್ಕತಾ ಹಾಗೂ ಚೆನ್ನೈ ನಗರಗಳಲ್ಲಿರುವ ಎಲ್ಲಾ ಡುಕಾಟಿ ಡೀಲರ್ ಗಳ ಬಳಿ ಮಾರಾಟ ಮಾಡಲಾಗುವುದು.

Share This Video


Download

  
Report form
RELATED VIDEOS