ಆಡಿ ಕಂಪನಿಯು ತನ್ನ ಬಹುನಿರೀಕ್ಷಿತ ಎ 4 ಸೆಡಾನ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಆಡಿ ಎ 4 ಸೆಡಾನ್ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.42.34 ಲಕ್ಷಗಳಾಗಿದೆ.
ಆಡಿ ಎ 4 ಸೆಡಾನ್ ಕಾರನ್ನು ಪ್ರೀಮಿಯಂ ಪ್ಲಸ್ ಹಾಗೂ ಟೆಕ್ನಾಲಜಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರಿನ ಬುಕ್ಕಿಂಗ್ ಗಳನ್ನು ಎರಡು ವಾರಗಳ ಹಿಂದೆಯೇ ಆರಂಭಿಸಲಾಗಿದೆ.
ಈ ಕಾರನ್ನು ಖರೀದಿಸ ಬಯಸುವವರು ಆನ್‌ಲೈನ್ ಮೂಲಕ ಅಥವಾ ದೇಶಾದ್ಯಂತವಿರುವ ಕಂಪನಿಯ ಡೀಲರ್ ಗಳ ಬಳಿ ರೂ.2 ಲಕ್ಷ ಪಾವತಿಸಿ ಹೊಸ ಆಡಿ ಎ 4 ಸೆಡಾನ್ ಕಾರನ್ನು ಬುಕ್ಕಿಂಗ್ ಮಾಡಬಹುದು.
ಹೊಸ ಆಡಿ ಎ 4 ಸೆಡಾನ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.