ದೇಶಿಯ ಮಾರುಕಟ್ಟೆಯಲ್ಲಿ ಕ್ಯೂ 2 ಎಸ್‌ಯುವಿ ಬಿಡುಗಡೆಗೊಳಿಸಿದ ಆಡಿ

DriveSpark Kannada 2020-10-17

Views 17.7K

ಆಡಿ ತನ್ನ ಕ್ಯೂ 2 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಆಡಿ ಕ್ಯೂ 2 ಎಸ್‌ಯುವಿ ಬೇಸ್ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.34.99 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ರೂ.48.89 ಲಕ್ಷಗಳಾಗಿದೆ.

ಕ್ಯೂ 2 ಆಡಿ ಕಂಪನಿಯ 'ಕ್ಯೂ' ಸರಣಿಯ ಎಂಟ್ರಿ ಲೆವೆಲ್ ಎಸ್‌ಯುವಿಯಾಗಿದೆ. ಕ್ಯೂ 2 ಎಸ್‌ಯುವಿ ಕ್ಯೂ 8, ಎ 8 ಎಲ್, ಆರ್ ಎಸ್ 7, ಆರ್ ಎಸ್ ಕ್ಯೂ 8 ಹಾಗೂ ಕ್ಯೂ 8 ಸೆಲೆಬ್ರೇಷನ್ ನಂತರ ಆಡಿ ಕಂಪನಿಯು 2020ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದ ಆರನೇ ಮಾದರಿಯಾಗಿದೆ.

ಆಡಿ ಕ್ಯೂ 2 ಎಸ್‌ಯುವಿಯನ್ನು ಅಡ್ವಾನ್ಸ್ಡ್ ಲೈನ್ ಹಾಗೂ ಡಿಸೈನ್ ಲೈನ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಅಡ್ವಾನ್ಸ್ಡ್ ಲೈನ್ ಮಾದರಿಯು ಸ್ಟ್ಯಾಂಡರ್ಡ್, ಪ್ರೀಮಿಯಂ ಹಾಗೂ ಪ್ರೀಮಿಯಂ ಪ್ಲಸ್ I ಎಂಬ ಮೂರು ರೂಪಾಂತರಗಳನ್ನು ಒಳಗೊಂಡಿದೆ.

Share This Video


Download

  
Report form
RELATED VIDEOS