ಹೊಸ 3 ಸೀರೀಸ್ ಗ್ರ್ಯಾನ್ ಲಿಮೋಸಿನ್ ಕಾರ್ ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು

DriveSpark Kannada 2021-01-22

Views 17.6K

ಬಿಎಂಡಬ್ಲ್ಯು ಕಂಪನಿಯು ತನ್ನ ಹೊಸ 3 ಸೀರೀಸ್ ಗ್ರ್ಯಾನ್ ಲಿಮೋಸಿನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು 3 ಸೀರೀಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.51.50 ಲಕ್ಷಗಳಾಗಿದೆ.

ಹೊಸ ಬಿಎಂಡಬ್ಲ್ಯು 3 ಸೀರೀಸ್ ಗ್ರ್ಯಾನ್ ಲಿಮೋಸಿನ್ ಕಾರ್ ಅನ್ನು 330 ಎಲ್ ಐ ಲಕ್ಷುರಿ ಲೈನ್, 330 ಎಲ್ ಐ ಎಂ ಸ್ಪೋರ್ಟ್‌ ಫಸ್ಟ್ ಎಡಿಷನ್ ಹಾಗೂ 320 ಎಲ್ ಡಿ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಹೊಸ 3 ಸೀರೀಸ್ ಗ್ರ್ಯಾನ್ ಲಿಮೋಸಿನ್‌ ಕಾರಿನ ಬುಕ್ಕಿಂಗ್'ಗಳನ್ನು ಈ ತಿಂಗಳ ಆರಂಭದಲ್ಲಿ ಆರಂಭಿಸಲಾಗಿತ್ತು. ಈ ಸೆಡಾನ್ ಕಾರ್ ಅನ್ನು ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಕಂಪನಿಯು ವಿಶೇಷ ಕೊಡುಗೆಗಳನ್ನು ಘೋಷಿಸಿತ್ತು.

ಹೊಸ 3 ಸೀರೀಸ್ ಗ್ರ್ಯಾನ್ ಲಿಮೋಸಿನ್ ಕಾರ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Share This Video


Download

  
Report form
RELATED VIDEOS