ರೆನಾಲ್ಟ್ ಇಂಡಿಯಾ ಕಂಪನಿಯು 2021ರ ಹೊಸ ಟ್ರೈಬರ್ ಎಂಪಿವಿಯನ್ನು ಬಿಡುಗಡೆಗೊಳಿಸಿದೆ. ಹೊಸ ರೆನಾಲ್ಟ್ ಟ್ರೈಬರ್ ಎಂಪಿವಿಯ ಆರಂಭಿಕ ಬೆಲೆ ರೂ.5.30 ಲಕ್ಷಗಳಾದರೆ, ಟಾಪ್ ಎಂಡ್ ಈಸಿ-ಆರ್ ಎಎಂಟಿ ಮಾದರಿಯ ಬೆಲೆ ರೂ.7.65 ಲಕ್ಷಗಳಾಗಿದೆ.
ಹೊಸ ಟ್ರೈಬರ್ ಎಂಪಿವಿಯ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದೆ. ಗ್ರಾಹಕರು ರೂ.11,000 ಪಾವತಿಸಿ ಟ್ರೈಬರ್ ಎಂಪಿವಿಯನ್ನು ಬುಕ್ಕಿಂಗ್ ಮಾಡಬಹುದು. ಹೊಸ ಟ್ರೈಬರ್ ಎಂಪಿವಿಯು ಸ್ಟೀಯರಿಂಗ್ ಮೌಂಟೆಡ್ ಆಡಿಯೊ, ಫೋನ್ ಕಂಟ್ರೋಲ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟಬಲ್'ಗಳನ್ನು ಹೊಂದಿದೆ.
ರೆನಾಲ್ಟ್ ಟ್ರೈಬರ್ ಎಂಪಿವಿಯಲ್ಲಿ 7 ಜನರು ಸುಲಭವಾಗಿ ಕುಳಿತುಕೊಳ್ಳಬಹುದು. ಮೂರನೇ ಸಾಲಿನ ಸೀಟುಗಳನ್ನು ಮಡಚುವುದರಿಂದ 625-ಲೀಟರ್ ಬೂಟ್ ಸ್ಪೇಸ್ ಪಡೆಯಬಹುದು.
ಹೊಸ ಟ್ರೈಬರ್ ಎಂಪಿವಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.