ಚೆನ್ನೈ ಮೂಲದ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಎಂಟ್ರಿ ಲೆವೆಲ್ ಬುಲೆಟ್ 350 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ಸತತ ಎರಡನೇ ತಿಂಗಳು ಈ ಬೈಕಿನ ಬೆಲೆಯನ್ನು ಹೆಚ್ಚಿಸಿದೆ.
ರೆಟ್ರೋ ಶೈಲಿಯ ಬುಲೆಟ್ 350 ಬೈಕ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಅಪ್ ಡೇಟ್ ಮಾಡಲಾಗಿದೆ. ಈ ಬೈಕಿನ ಆರಂಭಿಕ ಬೆಲೆ ರೂ.1.21 ಲಕ್ಷಗಳಾಗಿದೆ. ಸತತ ಬೆಲೆ ಏರಿಕೆಯ ನಂತರ ಈ ಬೈಕಿನ ಆರಂಭಿಕ ಬೆಲೆ ಈಗ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.30 ಲಕ್ಷಗಳಾಗಿದೆ.
ರಾಯಲ್ ಎನ್‌ಫೀಲ್ಡ್ ಕಂಪನಿಯು ಬುಲೆಟ್ 350 ಬೈಕಿನ ಎಲ್ಲಾ ಮಾದರಿಗಳ ಬೆಲೆಗಳನ್ನು ಸುಮಾರು ರೂ.3,500ಗಳಷ್ಟು ಏರಿಕೆ ಮಾಡಿದೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.