ಫ್ರಾನ್ಸ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಕಿಗರ್ ಕಾಂಪ್ಯಾಕ್ಟ್ ಎಸ್‌ಯುವಿ ಬೆಲೆಯನ್ನು ಹೆಚ್ಚಿಸಿದೆ. ರೆನಾಲ್ಟ್ ಕಂಪನಿಯು ಕಿಗರ್ ಎಸ್‌ಯುವಿಯನ್ನು ಈ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.
ಕಿಗರ್ ಎಸ್‌ಯುವಿಯ ಕೆಲವು ಮಾದರಿಗಳ ಬೆಲೆಯನ್ನು ರೂ.3,000ಗಳಿಂದ ರೂ.33,000ಗಳವರೆಗೆ ಏರಿಕೆ ಮಾಡಲಾಗಿದೆ. ಕಿಗರ್ ಎಸ್‌ಯುವಿಯನ್ನು ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್, ಆರ್‌ಎಕ್ಸ್‌ಟಿ ಹಾಗೂ ಆರ್‌ಎಕ್ಸ್ ಝಡ್ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಮೂಲ ಮಾದರಿಯಾದ ಆರ್‌ಎಕ್ಸ್‌ಇ ಮಾದರಿಯ ಬೆಲೆಯನ್ನು ಏರಿಕೆ ಮಾಡಿಲ್ಲ. ಮಿಡ್ ರೇಂಜ್ ಮಾದರಿಯಾದ ಆರ್‌ಎಕ್ಸ್‌ಎಲ್ ಬೆಲೆಗಳನ್ನು ರೂ.23,000ಗಳವರೆಗೆ ಹೆಚ್ಚಿಸಲಾಗಿದೆ.
ರೆನಾಲ್ಟ್ ಕಿಗರ್ ಕಾಂಪ್ಯಾಕ್ಟ್ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.