ಬಿಎಂಡಬ್ಲ್ಯು ಮೋಟರ್ರಾಡ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಎಂ 1000 ಆರ್‌ಆರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಸ್ಪೋರ್ಟ್ ಎಂಬ ಎರಡು ಮಾದರಿಗಳಲ್ಲಿ ಮಾಡಲಾಗುತ್ತದೆ.
ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.42 ಲಕ್ಷಗಳಾದರೆ, ಟಾಪ್-ಎಂಡ್ ಮಾದರಿಯ ಬೆಲೆ ರೂ.45 ಲಕ್ಷಗಳಾಗಿದೆ. ಎಂ 1000 ಆರ್‌ಆರ್ ಬೈಕ್ ಅನ್ನು ಸಿಬಿಯು ಮೂಲಕ ಮಾರಾಟ ಮಾಡಲಾಗುತ್ತದೆ.
ಈ ಬೈಕ್ ಅನ್ನು ಎಂ ಸ್ಪೋರ್ಟ್'ನ ಲೈಟ್ ವೈಟ್, ರೇಸಿಂಗ್ ಬ್ಲೂ ಮೆಟಾಲಿಕ್ ಹಾಗೂ ರೇಸಿಂಗ್ ರೆಡ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಕಿನಲ್ಲಿ ಅಳವಡಿಸಿರುವ 999 ಸಿಸಿ ಇನ್-ಲೈನ್ ಫೋರ್ ಎಂಜಿನ್ 14,500 ಆರ್‌ಪಿಎಂನಲ್ಲಿ 210 ಬಿಹೆಚ್‌ಪಿ ಪವರ್ ಹಾಗೂ 11,000 ಆರ್‌ಪಿಎಂನಲ್ಲಿ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.