ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ತನ್ನ ಫೇಸ್ಲಿಫ್ಟೆಡ್ ಎಕ್ಸ್ 1 ಎಸ್-ಡ್ರೈವ್ 20ಡಿ ಎಸ್ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು ಎಕ್ಸ್1 ಫೇಸ್ಲಿಫ್ಟ್ ಎಸ್ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.35.90 ಲಕ್ಷಗಳಾಗಿದೆ.
ಬಿಎಂಡಬ್ಲ್ಯು ಎಕ್ಸ್1 ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಂಟ್ರಿ ಲೆವೆಲ್ ಐಷಾರಾಮಿ ಎಸ್ಯುವಿಗಳಲ್ಲಿ ಒಂದಾಗಿದೆ. ಇತ್ತೀಚಿಗೆ ನಾವು ಹೊಸ ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್ಯುವಿಯನ್ನು ಸಿಟಿಯೊಳಗೆ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. ಈ ಎಸ್ಯುವಿಯ ಡ್ರೈವಿಂಗ್ ಅನುಭವದ ಸಂಪೂರ್ಣ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.