ಫೋಕ್ಸ್‌ವ್ಯಾಗನ್ ತನ್ನ ಹೊಸ ಟಿಗ್ವಾನ್ ಆಲ್‌ಸ್ಪೇಸ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮುನ್ನ ಟೀಸರ್ ಬಿಡುಗಡೆಗೊಳಿಸಿದೆ. 2021 ಟಿಗ್ವಾನ್ ಆಲ್‌ಸ್ಪೇಸ್ ಕಾರಿನಲ್ಲಿ ಹಲವಾರು ಅಪ್‌ಡೇಟ್'ಗಳನ್ನು ಮಾಡಲಾಗಿದೆ.
ಫೇಸ್‌ಲಿಫ್ಟೆಡ್ ಟಿಗ್ವಾನ್ ಆಲ್‌ಸ್ಪೇಸ್ ಕಾರಿನಲ್ಲಿ ಶಾರ್ಪ್ ಆದ ಹೊಸ ಹೆಡ್‌ಲ್ಯಾಂಪ್, ಹೊಸ ಗ್ರಿಲ್, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್, ಹೆಡ್‌ಲೈಟ್‌ಗಳಿಗಾಗಿ ಐಕ್ಯೂ ಲೈಟಿಂಗ್ ಟೆಕ್ನಾಲಜಿಯನ್ನು ನೀಡಲಾಗಿದೆ.
ಈ ಲೈಟಿಂಗ್ ಟೆಕ್ನಾಲಜಿಯು ಎದುರುಗಡೆ ಬರುತ್ತಿರುವ ವಾಹನ ಸವಾರರಿಗೆ ಯಾವುದೇ ರೀತಿ ತೊಂದರೆ ಮಾಡದಂತೆ ಹೈ ಬೀಮ್ ಬಳಸಲು ನೆರವಾಗಲಿದೆ.
ಹೊಸ ಟಿಗ್ವಾನ್ ಆಲ್‌ಸ್ಪೇಸ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.