ಟಾಟಾ ಮೋಟಾರ್ಸ್ ಕಂಪನಿಯು ಹೊಸ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಪಂಚ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಹೊಸ ಟಾಟಾ ಪಂಚ್ ಕಾರು 84.4 ಬಿಎಚ್‌ಪಿ ಸಾಮರ್ಥ್ಯದ 1.2-ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಣೆ ಹೊಂದಿದ್ದು, ಇದು ಆಕರ್ಷಕವಾದ ವಿನ್ಯಾಸ ಮತ್ತು ಹಲವಾರು ಹೊಸ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಕೆಲವು ಅತ್ಯುತ್ತಮ ದರ್ಜೆಯ ಗುಣಲಕ್ಷಣಗಳನ್ನು ಹೊಂದಿದೆ. ಟಾಟಾ ಪಂಚ್ ಕಾರಿನ ಈ ವಿಮರ್ಶೆಯಲ್ಲಿ ಕಾರಿನ ವಿಶೇಷತೆಗಳು, ಹೊಸ ವೈಶಿಷ್ಟ್ಯತೆಗಳು ಸೇರಿದಂತೆ ಪ್ರಮುಖ ಮಾಹಿತಿಗಳು ನೀವು ಇಲ್ಲಿ ಕಾಣಬಹುದಾಗಿದೆ.