ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಫಾರ್ಚೂನರ್ ಪೂರ್ಣ ಗಾತ್ರದ ಎಸ್‍ಯುವಿ ಸೆಗ್'ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‍ಯುವಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ಟೊಯೊಟಾ ಕಂಪನಿಯು ತನ್ನ ಫಾರ್ಚೂನರ್ ಎಸ್‍ಯುವಿಯ ರೇಂಜ್-ಟಾಪಿಂಗ್ ಫೇಸ್‌ಲಿಫ್ಟೆಡ್ ಲೆಜೆಂಡರ್ ಮಾದರಿಯನ್ನು ಈ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಲೆಜೆಂಡರ್ ಸ್ಟ್ಯಾಂಡರ್ಡ್ ಫಾರ್ಚೂನರ್ ಎಸ್‍ಯುವಿಯ ಸ್ಪೋರ್ಟಿಯರ್ ಮಾದರಿಯಾಗಿದೆ.
ಈ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯನ್ನು ನಾವು ಒಂದೆರಡು ದಿನಗಳ ಕಾಲ ಸಿಟಿಯೊಳಗೆ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಿದೆವು. ಈ ಎಸ್‍ಯುವಿಯ ವಿನ್ಯಾಸ, ಪರ್ಫಾಮೆನ್ಸ್, ಎಂಜಿನ್ ಹಾಗೂ ಡ್ರೈವ್ ಬಗೆಗಿನ ಅನುಭವವನ್ನು ಈ ವೀಡಿಯೊದಲ್ಲಿ ನೋಡೋಣ.