ಎನ್ಎಂಡಬ್ಲ್ಯು(NMW) ರೇಸಿಂಗ್ ಕಂಪನಿಯು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್ ಮಾದರಿಗಾಗಿ ವಿಶೇಷವಾದ ರೇಸಿಂಗ್ ಕಿಟ್ ಸಿದ್ದಪಡಿಸಿದ್ದು, ಮಾಡಿಫೈಗೊಳಿಸಲಾದ ಈ ಹಿಮಾಲಯನ್ ಮಾದರಿಯಲ್ಲಿ ಹಲವಾರು ಆಸಕ್ತಿದಾಯಕವಾದ ತಾಂತ್ರಿಕ ಅಂಶಗಳನ್ನು ಡ್ರೈವ್‌ಸ್ಪಾರ್ಕ್ ತಂಡವು ನಿಮಗೆ ವಿವಿಧ ಹಂತದ ಸಂಚಿಕೆಗಳನ್ನು ಪ್ರಕಟಿಸುತ್ತಿದೆ. ಕಳೆದ ಸಂಚಿಕೆಯಲ್ಲಿ ಎಂಜಿನ್ ಕಾರ್ಯಕ್ಷಮತೆಗೆ ಸಿದ್ದಪಡಿಸಿರುವ ಮಾಡಿಫೈ ಕಿಟ್ ಮತ್ತು ಹೊಸ ತಂತ್ರಜ್ಞಾನ ಪ್ರೇರಣೆಯ ಗೇರ್‌ಬಾಕ್ಸ್‌ನ ಕಾರ್ಯನಿರ್ವಹಣೆಯ ಬಗೆಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು.
ಈ ಸಂಚಿಕೆಯಲ್ಲಿ ವಿಶೇಷ ತಾಂತ್ರಾಶದೊಂದಿಗೆ ಮಾಡಿಫೈಗೊಂಡಿವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 500ಸಿಸಿ ಮಾದರಿಯ ಬಿಗ್ ಬೋರ್ ಕಿಟ್, ದೊಡ್ಡದಾದ ವಾಲ್ವ್, ಪೋರ್ಟೆಡ್ ಇಂಜಿನ್ ಹೆಡ್, ಹೈ-ಲಿಫ್ಟ್ ಕ್ಯಾಮ್‌ಶಾಫ್ಟ್ ಮತ್ತು 4-ಮ್ಯಾಪ್ ರೇಸಿಂಗ್ ಇಸಿಯು ಜೋಡಣೆ ವಿಧಾನವನ್ನು ಚರ್ಚಿಸಿದ್ದೇವೆ. ಮಾಡಿಫೈ ಕಿಟ್ ಹೊಂದಿರುವ ಎಂಜಿನ್ ಈಗ ಮೋಟಾರ್‌ಸೈಕಲ್‌ಗೆ ಅಳವಡಿಸಿ ಚಾಲನೆ ಮಾಡಲು ಸಿದ್ದವಾಗಿದ್ದು, ಬಿಗ್ ಬೋರ್ ಕಿಟ್ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿ.