ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ವರ್ಟಸ್ ಸೆಡಾನ್ ಮಾದರಿಯುನ್ನು ಜಾಗತಿಕ ಮಾರುಕಟ್ಟೆಗಳಿಗಾಗಿ ಅನಾವರಣಗೊಳಿಸಿದೆ. ಇದು ಸ್ಧಗಿತಗೊಳ್ಳಲಿರುವ ವೆಂಟೊ ಮಾದರಿಯ ಸ್ಥಾನವನ್ನು ತುಂಬಲಿದ್ದು, ಹೊಸ ಕಾರಿನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಆಯ್ಕೆಗಳು ಸ್ಕೋಡಾ ಸ್ಲಾವಿಯಾದೊಂದಿಗೆ ಹಂಚಿಕೊಳ್ಳುತ್ತದೆ. ಫೋಕ್ಸ್‌ವ್ಯಾಗನ್ ವರ್ಟಸ್ ತನ್ನ ವಿಭಾಗದಲ್ಲಿಯೇ ಅತಿ ಹೆಚ್ಚು ಉದ್ದಳತೆ ಹೊಂದಿರುವ ಸೆಡಾನ್ ಮಾದರಿಯಾಗಿದ್ದು, ಹೊಸ ಕಾರು 1.0-ಲೀಟರ್ ಟಿಎಸ್ಐ ಮತ್ತು 1.5-ಲೀಟರ್ ಟರ್ಬೊ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಭಾರತದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಗೊಳ್ಳಲಿರುವ ಹೊಸ ಕಾರು ಭಾರತದಲ್ಲಿ ಮಾತ್ರವಲ್ಲ 25 ದೇಶಗಳಿಗೆ ಇಲ್ಲಿಂದಲೇ ರಫ್ತುಗೊಳ್ಳಲಿದ್ದು, ಹೊಸ ಕಾರಿನ ಬಗೆಗೆ ಇನ್ನಷ್ಟು ತಿಳಿಯಲು ಈ ವಿಡಿಯೋ ಪೂರ್ತಿಯಾಗಿ ವೀಡಿಯೊವನ್ನು ವೀಕ್ಷಿಸಿ.
#VolkswagenVirtus #VolkswagenIndia #Virtus