ನಿನ್ನೆ ರಾಜ್ಯಾದ್ಯಂತ ಎಸಿಬಿ ನಡೆಸಿದ ರೇಡ್‍ನಲ್ಲಿ 21 ಅಧಿಕಾರಿಗಳ ಬಳಿ ಭಾರೀ ಪ್ರಮಾಣದಲ್ಲಿ ಆದಾಯಕ್ಕೂ ಮೀರಿದ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ಇದರ ವಿವರನ್ನು ಎಸಿಬಿ ರಿಲೀಸ್ ಮಾಡಿದ್ದು, ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿರುವವರ ಡೀಟೇಲ್ಸ್ ಅನ್ನು ಕ್ವಿಕ್ ಆಗಿ ನೋಡೋಣ.. ನಿನ್ನೆ ರಾಜ್ಯಾದ್ಯಂತ ಎಸಿಬಿ ನಡೆಸಿದ ರೇಡ್‍ನಲ್ಲಿ 21 ಅಧಿಕಾರಿಗಳ ಬಳಿ ಭಾರೀ ಪ್ರಮಾಣದಲ್ಲಿ ಆದಾಯಕ್ಕೂ ಮೀರಿದ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ಇದರ ವಿವರನ್ನು ಎಸಿಬಿ ರಿಲೀಸ್ ಮಾಡಿದ್ದು, ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿರುವವರ ಡೀಟೇಲ್ಸ್ ಅನ್ನು ಕ್ವಿಕ್ ಆಗಿ ನೋಡೋಣ.. ಅಮಾನತುಗೊಂಡಿರುವ ಪೊಲೀಸ್ ಇನ್ಸ್‍ಪೆಕ್ಟರ್ ಉದಯ ರವಿಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ವಿವಿಧೆಡೆ 79 ಎಕರೆ 23 ಗುಂಟೆ ಕೃಷಿ ಭೂಮಿ, ಮುದಗಲ್ ನಲ್ಲಿ 2 ನಿವೇಶನ, 1 ಕೆಜಿ 36 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದೆ. ಬೆಂಗಳೂರು ಉತ್ತರ ವಿವಿ ನಿವೃತ್ತ ರಿಜಿಸ್ಟ್ರಾರ್ ಡಾ.ಕೆ. ಜನಾರ್ದನ್ ಅವರ ಹೆಸರಲ್ಲಿ ಆಂಧ್ರ ಪ್ರದೇಶದಲ್ಲಿ ಸ್ಕೂಲ್ ನಡೀತಿರೋದು ಬೆಳಕಿಗೆ ಬಂದಿದೆ. ಕಾರವಾರದಲ್ಲಿರೋ ಉತ್ತರ ಕನ್ನಡ ಜಿಲ್ಲಾ ನೊಂದಣಾಧಿಕಾರಿ ಬಿಎಸ್ ಶ್ರೀಧರ್‍ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 2 ವಾಸದ ಮನೆ, ನೆಲಮಂಗಲದಲ್ಲಿ ಖಾಲಿ ನಿವೇಶನ, ಕನಕಪುರದಲ್ಲಿ ಫಾರ್ಮ್ ಹೌಸ್, ನೆಲಮಂಗಲದಲ್ಲಿ 2 ಎಕರೆ ಕೃಷಿ ಜಮೀನು, 24 ಲಕ್ಷ ರೂ ಠೇವಣಿ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದದಲ್ಲಿ ಸಣ್ಣ ನೀರಾವರಿ ಎಇ ಆಗಿರೋ ಮೋಹನ್ ಕುಮಾರ್‍ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 1 ಮನೆ, 7 ಖಾಲಿ ನಿವೇಶನ, 2 ವಾಣಿಜ್ಯ ಸಂಕೀರ್ಣಗಳು, 2 ಕೆ.ಜಿ 279 ಗ್ರಾಂ ಚಿನ್ನಾಭರಣ 15 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ. ಸಣ್ಣ ನಿರಾವರಿ ಇಲಾಖೆಯ ಅಸಿಸ್ಟೆಂಟ್ ಎಂಜಿನಿಯ್ ಪರಮೇಶ್ವರಪ್ಪಗೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ 2 ವಾಸದ ಮನೆ, 7 ನಿವೇಶನ 23 ಗ್ರಾಂನ ಡೈಮಂಡ್ ನೆಕ್‍ಲೆಸ್ ಸಿಕ್ಕಿದೆ. ಈ ಮಧ್ಯೆ, ಇಂದೂ ಪರಿಶೀಲನೆ ನಡೆಯುವ ಸಾಧ್ಯತೆ ಇದೆ.
#publictv #newscafe #hrranganath