ಕಳಸದಲ್ಲಿ ಅಪರೂಪದ ಮಲಬಾರ್ ಪಿಟ್ ವೈಪರ್ ಹಾವು ಪತ್ತೆ: ವಿಡಿಯೋ

ETVBHARAT 2025-08-01

Views 488

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿಗೆ ಅಪರೂಪದಲ್ಲೇ ಅಪರೂಪದ ಹಾವೊಂದು ಪತ್ತೆಯಾಗಿದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಕಾಳಿಂಗ ಸರ್ಪಗಳು ಹೆಚ್ಚು. ಆದರೆ, ಕಾಫಿನಾಡ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮಲಬಾರ್ ಪಿಟ್ ವೈಪರ್ ಹಾವು ಕಂಡುಬಂದಿದೆ. 

ಕೇವಲ ಮೂರಡಿ ಬೆಳೆಯುವ ಈ ಹಾವು ತನ್ನ ಇಡೀ ಜೀವಿತಾವಧಿಯಲ್ಲೂ ಅಷ್ಟೇ ಉದ್ದ ಇರುತ್ತದೆ. ಅಷ್ಟೇ ಅಲ್ಲದೇ, ದಪ್ಪವಾಗುತ್ತದೆಯೇ ವಿನಃ ಉದ್ದವಾಗುವುದಿಲ್ಲ. ಇಂಥ ಉರಗ ಪಶ್ಚಿಮ ಘಟ್ಟಗಳ ತಪ್ಪಲಿನ ಕಳಸ ತಾಲೂಕಿನ ಬೇಡಕ್ಕಿ ಗ್ರಾಮದಲ್ಲಿ ಸೆರೆ ಸಿಕ್ಕಿದೆ.

ಇದರ ವಿಷ ಮಾರಣಾಂತಿಕ ಅಲ್ಲದಿದ್ದರೂ ತೀವ್ರ ನೋವಾಗುವುದರ ಜೊತೆ ಕೈಕಾಲು ಊದಿಕೊಳ್ಳುತ್ತದೆ. ಆದರೆ, ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ಕಚ್ಚಿದ ಜಾಗ ಗ್ಯಾಂಗ್ರಿನ್ ಆಗಿ ಕೊಳೆಯುತ್ತಾ ಹೋಗುತ್ತದೆ. ಉರಗ ತಜ್ಞ ರಿಜ್ವಾನ್ ಅವರು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಸಿಬ್ಬಂದಿಯ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ನಾಗರಪಂಚಮಿ ದಿನದಂದೇ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಾಗರಹಾವು ಪ್ರತ್ಯಕ್ಷ

ಇದನ್ನೂ ಓದಿ: ಮೈಸೂರು: ಗಾಳಿಪಟದ ದಾರಕ್ಕೆ ಸಿಲುಕಿ ವಿಲವಿಲ ಒದ್ದಾಡಿದ ಹದ್ದಿನ ರಕ್ಷಣೆ:- ವಿಡಿಯೋದಲ್ಲಿ ನೋಡಿ

Share This Video


Download

  
Report form
RELATED VIDEOS