ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಗೆ ಹೋದ ಕ್ಷಣದಲ್ಲಿ ಕೆಲವರು 'ಓ..ಚಂದನ್ ಶೆಟ್ಟಿ ಹೋಗುತ್ತಾರಾ ಸೂಪರ್...' ಎಂದರೆ, ಹಲವರು 'ಯಾರು ಈ ಹುಡುಗ..?' ಅಂತ ರಾಗ ಎಳೆದ್ರು. ಜೊತೆಗೆ ಚಂದನ್ ಶೆಟ್ಟಿ ಎಂಟ್ರಿಗೆ ಐಂದ್ರಿತಾ ರೇ ಯಾಕೆ ಡ್ಯಾನ್ಸ್ ಮಾಡಿದ್ರು ಎನ್ನುವ ಕನ್ಫ್ಯೂಷನ್ ಕೂಡ ಅನೇಕರಿಗೆ ಕಾಡಿತ್ತು. ಚಂದನ್ ಶೆಟ್ಟಿ ಒಬ್ಬ ಪ್ರತಿಭಾವಂತ Rapper. ತನ್ನ ಹಾಡುಗಳ ಮೂಲಕ ಯುವ ಜನತೆಯ ಹಾಟ್ ಫೇವರೆಟ್ ಆಗಿದ್ದಾರೆ. ತಾನೇ ಹಾಡುಗಳನ್ನು ಬರೆದು, ಸಂಗೀತ ನೀಡಿ, ಹಾಡಿ ಇಂದು ರಾಕ್ ಸ್ಟಾರ್ ಆಗಿದ್ದಾರೆ. ಈವರೆಗೂ ಬರೀ ನಾಲ್ಕೇ ನಾಲ್ಕು ಹಾಡುಗಳನ್ನು ಮಾಡಿರುವ ಚಂದನ್ ಶೆಟ್ಟಿ ಈಗ ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಅಂದಹಾಗೆ, ಸದ್ಯ 'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮದ ಸ್ಪರ್ಧಿಯಾಗಿರುವ ಚಂದನ್ ಶೆಟ್ಟಿ ಬಗ್ಗೆ ಒಂದಷ್ಟು ವಿವರಗಳು ಇಲ್ಲಿದೆ
When Chandan Shetty went to Bigg Boss's house, some of them said, 'Oh..Chandan Shetty is going to be super ...', someone think 'who is this boy ..?' Chandan Shetty is a talented rapper. he is a hot favorite of the young people through his songs. he has written 4 songs, performed music, and is a rock star today. Chandan Shetty now stepped up the Big Boss platform..,watch this video