ಖಾಸಗಿ ಆಸ್ಪತ್ರೆಗಳ ಮುಷ್ಕರ : ಡಾ.ದೇವಿ ಪ್ರಸಾದ್ ಶೆಟ್ಟಿ ಖಡಕ್ ಸಂದೇಶ | Oneindia Kannada

Oneindia Kannada 2017-11-03

Views 1

ಕರ್ನಾಟಕದ ಖಾಸಗಿ ಆಸ್ಪತ್ರೆಗಳ ವೈದ್ಯರು ನವೆಂಬರ್ 3ರ ಶುಕ್ರವಾರ ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ತುರ್ತು ಸೇವೆಗಳನ್ನು ಹೊರತು ಪಡಿಸಿ ಉಳಿದ ಸೇವೆಗಳನ್ನು ಸ್ಥಗಿತಗೊಳಿಸಲಿದ್ದಾರೆ. ಕರ್ನಾಟಕ ಸರ್ಕಾರ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ. ಶುಕ್ರವಾರ ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿವೆ. ನಾರಾಯಣ ಹೃದಯಾಲಯದ ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ನ.3ರ ಮುಷ್ಕರದ ಬಗ್ಗೆ ಮಾತನಾಡಿದ್ದಾರೆ. 'ಸರ್ಕಾರ ನಮ್ಮ ಕರ್ತವ್ಯಕ್ಕೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಅಸಹಕಾರ ಸೇರಿದಂತೆ ಯಾವುದೇ ಘಟನೆಗಳು ನಡೆದರೆ ಮೆಡಿಕಲ್ ಕೌನ್ಸಿಲ್, ನ್ಯಾಯಾಲಯಗಳ ಮೂಲಕ ವಿಚಾರಣೆ ನಡೆಯುತ್ತಿದೆ' ಎಂದು ಹೇಳಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಮಗೆ ವಕೀಲರ ಮೂಲಕವೂ ಉತ್ತರ ನೀಡದಂತೆ ಕಾಯ್ದೆ ರೂಪಿಸಲಾಗುತ್ತಿದೆ. ಉಗ್ರ ಕಸಬ್ ಕೂಡ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶವಿತ್ತು. ಇದು ನಮ್ಮ ಉತ್ಕೃಷ್ಕವಾದ ವೃತ್ತಿಯ ಪ್ರಶ್ನೆಯಾಗಿದೆ' ಎಂದು ತಿಳಿಸಿದ್ದಾರೆ...

Chairman and Executive Director of Narayana Health Dr. Devi Prasad Shetty reaction on private hospital doctors one day strike on November 3, 2017 to oppose Karnataka Private Medical Establishment Act (KPMA).

Share This Video


Download

  
Report form
RELATED VIDEOS