ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಾಲಿವುಡ್ ಸಿನಿಮಾ ಮಂದಿ. ಕನ್ನಡ ಸಿನಿಮಾರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿ ಗಿಟ್ಟಿಸಿಕೊಂಡಿರುವ ಚಿತ್ರ ಯಶ್ ಅಭಿನಯದ 'ಕೆ.ಜಿ.ಎಫ್'. 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾದ ನಂತ್ರ ಯಶ್ ಅಭಿನಯಿಸುತ್ತಿರುವ ಸಿನಿಮಾ ಇದು. ಸಿಂಗಲ್ ಪೋಸ್ಟರ್ ನಿಂದಲೇ ಇಡೀ ಕನ್ನಡ ಸಿನಿಮಾರಂಗದಲ್ಲಿ ಕುತೂಹಲ ಕೆರಳಿಸಿರುವ 'ಕೆ.ಜಿ.ಎಫ್' ಸದ್ಯ ಚಿತ್ರೀಕರಣದ ಕೊನೆಯ ಹಂತ ತಲುಪಿದೆ. ಹೀಗಿರುವಾಗಲೇ, ಸಿನಿಮಾತಂಡ ಚಿತ್ರದ ಮೇಕಿಂಗ್ ಸ್ಟಿಲ್ಸ್ ಬಿಡುಗಡೆ ಮಾಡಿದೆ. 'ಕೆ.ಜಿ.ಎಫ್' ಚಿತ್ರದ ಮೇಕಿಂಗ್ ನೋಡಿರುವ ತಮಿಳು ಚಿತ್ರರಂಗದ ಅನೇಕರು 'ಕೆ.ಜಿ.ಎಫ್' ಸಿನಿಮಾ ತಂಡಕ್ಕೆ ಹಾಗೂ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. 'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾದ ಮೇಕಿಂಗ್ ಸ್ಟಿಲ್ಸ್ ಔಟ್ ಆಗಿದೆ. ಪೋಸ್ಟರ್ ಬಿಡುಗಡೆ ಆದ ಮೂರು ತಿಂಗಳ ನಂತರ ಯಶ್ ಹೊಸ ಲುಕ್ ದರ್ಶನ ಮಾಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.