ಫ್ಯಾಮಿಲಿ ಪವರ್' ಶೋ ಕಾನ್ಸೆಪ್ಟ್ ಕೇಳಿ ಪುನೀತ್ ಪತ್ನಿ ಏನು ಹೇಳಿದ್ದರು? | Filmibeat Kannada

Filmibeat Kannada 2017-11-21

Views 1.5K

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಲಿರುವ ಫ್ಯಾಮಿಲಿ ಪವರ್ ಗೇಮ್ ಶೋ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಈಗಾಗಲೇ ಕಾರ್ಯಕ್ರದ ರೆಕಾರ್ಡಿಂಗ್ ಶುರುವಾಗಿದೆ. ಈ ಮಧ್ಯೆ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅವರು ಶೂಟಿಂಗ್ ಸೆಟ್ ನಿಂದ ಫೇಸ್ ಬುಕ್ ಲೈವ್ ಗೆ ಬಂದಿದ್ದರು. ಈ ವೇಳೆ ಕಾರ್ಯಕ್ರಮದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡರು. ಫ್ಯಾಮಿಲಿ ಶೋ ಬಗ್ಗೆ ಪುನೀತ್ ಅವರಿಗೆ ಮೊದಲು ಕೇಳಿದಾಗ, ಅವರ ರಿಯಾಕ್ಷನ್ ಹೇಗಿತ್ತು? ಮತ್ತು ಅವರ ಪತ್ನಿ ಅಶ್ವಿನಿ ಏನಂದ್ರು ಎಂದು ತಿಳಿಯಲು ಮುಂದೆ ಓದಿ..'ಫ್ಯಾಮಿಲಿ ಪವರ್' ಕಾರ್ಯಕ್ರಮದ ಚಿತ್ರೀಕರಣ ಆರಂಭವಾಗಿದ್ದು, ಪುನೀತ್ ರಾಜ್ ಕುಮಾರ್ ಅವರ ಸಾಂಗ್ ಮುಗಿದಿದೆಯಂತೆ. ಬುಧವಾರ ಎಪಿಸೋಡ್ ರೆಕಾರ್ಡ್ ಆಗಲಿದ್ದು, ಈ ವಾರಾಂತ್ಯಕ್ಕೆ 'ಫ್ಯಾಮಿಲಿ ಪವರ್' ನೋಡಬಹುದು.ಫ್ಯಾಮಿಲಿ ಪವರ್' ಕಾರ್ಯಕ್ರಮದ ಬಗ್ಗೆ ಪುನೀತ್ ರಾಜ್ ಕುಮಾರ್ ಅವರ ಬಳಿ ಮಾತನಾಡಲು ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಅವರು ಮನೆಗೆ ಹೋದಾಗ, ಪುನೀತ್ ಮತ್ತು ಅವರ ಪತ್ನಿ ಅಶ್ವಿನಿ ಇಬ್ಬರು ಇದ್ದರು. ಈ ವೇಳೆ ಮೂರ್ನಾಲ್ಕು ಸಾಲಿನಲ್ಲಿ ಈ ಶೋ ಕಾನ್ಸೆಪ್ಟ್ ಬಗ್ಗೆ ವಿವರಿಸಿದರಂತೆ ನಿರ್ದೇಶಕರು.

Power star puneeth rajkumar's new reality show 'Family Power' shooting start.This show will be coming on every Saturday and Saturday in colors kannada, after this family power this i9s what appu's wife said watch this video

Share This Video


Download

  
Report form
RELATED VIDEOS