Bigg Boss Kannada 5: Week 6: Chandan Shetty plays safe for 6 weeks
ಅದೃಷ್ಟ ಅಂದ್ರೆ ಇದು.! ಏನ್ ಗುರು ಚಂದನ್ ಶೆಟ್ಟಿ ಲಕ್ಕು! 'ಬಿಗ್ ಬಾಸ್' ಮನೆಯಲ್ಲಿ ನಾಮಿನೇಟ್ ಆಗದೆ... ಯಾರ ಕೆಂಗಣ್ಣಿಗೂ ಗುರಿಯಾಗದೆ... ಟಾರ್ಗೆಟ್ ಆಗದೆ... ಇರುವುದು ತುಂಬಾ ಕಷ್ಟ. ಅಂಥದ್ರಲ್ಲಿ ನಮ್ಮ ಚಂದನ್ ಶೆಟ್ಟಿ ಸತತವಾಗಿ ಐದು ವಾರಗಳ ಕಾಲ ನಾಮಿನೇಟ್ ಆಗದೆ ಇದ್ದರು. ಆರನೇ ವಾರ ಚಂದನ್ ಶೆಟ್ಟಿ ನಾಮಿನೇಟ್ ಆಗಿದ್ದರೂ, ಲೆಕ್ಕಕ್ಕೆ ಇಲ್ಲ. ಯಾಕಂದ್ರೆ, ಈ ವಾರ ಎಲಿಮಿನೇಷನ್ ಇಲ್ಲ. ಹೀಗಾಗಿ ಚಂದನ್ ಶೆಟ್ಟಿಗೆ ಸತತ ಆರನೇ ವಾರವೂ ತಲೆ ನೋವಿಲ್ಲ. ಅದೃಷ್ಟ ಅಂದ್ರೆ ಹೀಗೆ ಇರಬೇಕು ನೋಡಿ..! ಅದ್ಯಾವ ಘಳಿಗೆಯಲ್ಲಿ 'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ ಕಾಲಿಟ್ರೋ, ಆರು ವಾರಗಳ ಕಾಲ ಫುಲ್ ಸೇಫ್ ಆಗಿದ್ದಾರೆ. ಈ ತರಹ ಅದೃಷ್ಟ 'ಬಿಗ್ ಬಾಸ್' ಮನೆಯಲ್ಲಿ ಇತರೆ ಯಾವ ಸ್ಪರ್ಧಿಗೂ ಸಿಕ್ಕಿಲ್ಲ.!