ಡಾ. ರಾಜ್ ಕುಮಾರ್ ಮೊಮ್ಮಗ ಶಾನ್ ಅಲಿಯಾಸ್ ಷಣ್ಮುಖ ಜೊತೆ ಸಿಂಧು ನಿಶ್ಚಿತಾರ್ಥ | Filmibeat Kannada

Filmibeat Kannada 2017-11-27

Views 3

ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ 'ಅಣ್ಣಾವ್ರ ಮೊಮ್ಮಗ'. ಡಾ ರಾಜ್ ಕುಮಾರ್ ಮನೆಯಲ್ಲಿ ಇನ್ನ ಕೆಲವೇ ದಿನಗಳಲ್ಲಿ ಮದುವೆ ಸಂಭ್ರಮ ಮನೆ ಮಾಡಲಿದೆ. ಕಳೆದ ವರ್ಷವಷ್ಟೇ ಅಣ್ಣಾವ್ರ ಮನೆಯ ಹಿರಿಯ ಮೊಮ್ಮಗಳ ಮದುವೆ ಅದ್ದೂರಿಯಾಗಿ ನಡೆದಿತ್ತು. ನಿರೂಪಮ ಶಿವರಾಜ್ ಕುಮಾರ್ ರ ಮದುವೆ ಆಗಿ ವರ್ಷ ಕಳೆಯುತ್ತಿದ್ದಂತೆ ಈಗ ಹಿರಿಯ ಮೊಮ್ಮಗನ ಮದುವೆ ಸಂಭ್ರಮ ಮನೆ ಮಾಡಿದೆ. 'ಡಾ ರಾಜ್ ಕುಮಾರ್' ಹಾಗೂ ಪಾರ್ವತಮ್ಮ ಅವರ ಹಿರಿಯ ಪುತ್ರಿ 'ಲಕ್ಷ್ಮಿ ಹಾಗೂ ಗೋವಿಂದರಾಜು' ರ ಪುತ್ರ 'ಶಾನ್' ರ ಮದುವೆ ನಿಶ್ಚಯವಾಗಿದೆ.ಕಲಾ ಸಾರ್ವಭೌಮ ಡಾ ರಾಜ್ ಕುಮಾರ್ ರ ಹಿರಿಯ ಪುತ್ರಿಯಾದ ಲಕ್ಷ್ಮಿ ಅವ್ರ ಹಿರಿಯ ಪುತ್ರ 'ಶಾನ್' (ಷಣ್ಮುಖ)ರ ನಿಶ್ವಿತಾರ್ಥ ಇತ್ತೀಚಿಗಷ್ಟೇ ನಡದಿದೆ. ಸಾಗರದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು ಇನ್ನ ಕೆಲವೇ ದಿನಗಳಲ್ಲಿ ಶಾನ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Share This Video


Download

  
Report form
RELATED VIDEOS