Kothirama alias Jyotiraj of chitradurga is missing in jog falls since yesterday who was on searching of a young man missing three days.
ಬೆಂಗಳೂರಿನ ಯುವಕ ಜೋಗದ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರಬಹುದು ಎಂಬ ಶಂಕೆಯಲ್ಲಿ ಅವ ಶೋಧಕ್ಕಿಳಿದಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಮ ನಾಪತ್ತೆಯಾಗಿದ್ದಾರೆ.ಮರುದಿನವಾದರೂ ವಾಪಾಸ್ ಬಾರದಿರುವುದು ಆತಂಕ ಸೃಷ್ಟಿ ಮಾಡಿದೆ. ಮೃತದೇಹ ಹುಡುಕಲೆಂದು ಮಂಗಳವಾರ ಮಧ್ಯಾಹ್ನ 2.30 ರ ಹೊತ್ತಿಗೆ ಜಲಪಾತಕ್ಕೆ ಇಳಿದ ಚಿತ್ರದುರ್ಗದ ಜ್ಯೋತಿರಾಜ್ ರಾತ್ರಿ 9 ಗಂಟೆಯಾದರೂ ವಾಪಾಸ್ ಬಂದಿರಲಿಲ್ಲ. ಸ್ಥಳದಲ್ಲಿ ಸಿದ್ದಾಪುರ ಮತ್ತು ಜೋಗ ಠಾಣೆ ಪೊಲೀಸರು, ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬದವರು ಮತ್ತು ಜ್ಯೋತಿರಾಜ್ ಶಿಷ್ಯ ಮೂರ್ತಿ ಇದುವರೆಗೂ ಕಾಯುತ್ತಿದ್ದಾರೆ.