ರಕ್ತ ಸಿಕ್ತ ಚರಿತ್ರೆ ಹೊತ್ತ ಭೀಮಾತೀರ ಇತ್ತೀಚಿನ ದಿನಗಳಲ್ಲಿ ಪೊಲೀಸರ ದೆಸೆಯಿಂದಾಗಿ ಸ್ವಲ್ಪ ಶಾಂತವಾಗಿತ್ತು. ಆದರೆ ಈಗ ಮತ್ತೆ ಅಲ್ಲಿ ಗುಂಡಿನ ಸದ್ದು ಕೇಳಿದೆ. ಜಿಲ್ಲೆಯ ಇಂಡಿಯಲ್ಲಿ ರೌಡಿ ಶೀಟರ್ ಒಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ, ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತೀಚೆಗೆ ಪೊಲೀಸರ ಗುಂಡಿನಿಂದ ಬಲಿಯಾದ ರೌಡಿ ಧರ್ಮರಾಜ್ ಚಡಚಣನ ಬಲಗೈ ಭಂಟ ಸೈಪನ್ ಐರಸಂಗ ಎಂಬುವನು ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ. ಇಂಡಿ ಗ್ರಾಮದಲ್ಲಿ ಜಾತ್ರೆ ಇದ್ದ ಕಾರಣ ಜಾತ್ರೆ ನೋಡಲು ಸೈಪನ್ ಗ್ರಾಮಕ್ಕೆ ಆಗಮಿಸಿದ್ದ. ಕುಡಿದ ಅಮಲಿನಲ್ಲಿದ್ದ ಸೈಪನ್ ಬೇಕೆಂದೆ ಕೆಲವರೊಂದಿಗೆ ಜಗಳ ತೆಗೆದಿದ್ದ, ಸಿದ್ದ ಪರಚಂಡಿ ಎಂಬುವರು ಜಗಳ ಬಿಡಿಸಲು ಮುಂದಾದಾಗ ಅಲ್ಲಿದ್ದವರನ್ನು ಹೆದರಿಸಲು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ. ಈ ಬಗ್ಗೆ ಸಿದ್ದು ಪರಚಂಡಿ ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Gun shots heard again near banks of Bheema and police once again need to bring in justice