ಪ್ರಥಮ್ ಇಷ್ಟು ದಿನ ತಮ್ಮ ಸಿನಿಮಾಗಳ ಮೂಲಕ ಮತ್ತು ವಿವಾದ ಮೂಲಕ ಸುದ್ದಿ ಮಾಡುತ್ತಿದ್ದರು. ಆದರೆ ಈಗ ಪ್ರಥಮ್ ಮದುವೆ ಸುದ್ದಿ ಎಲ್ಲ ಕಡೆ ಹರಿದಾಡಿದೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ಪ್ರಥಮ್ ಮದುವೆ ಆಗುತ್ತಿರುವ ಸುದ್ದಿ ನಿಜವೇ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿದೆ.ಒಂದು ಕಡೆ ಮದುವೆ ಸುದ್ದಿ ಆದರೆ, ಇನ್ನೊಂದು ಕಡೆ ಪ್ರಥಮ್ ಮನ ಗೆದ್ದ ಆ ಹುಡುಗಿ ಯಾರು ಎನ್ನುವ ಕೂತುಹಲ ಹುಟ್ಟಿಕೊಂಡಿದೆ. ಈ ಬಗ್ಗೆ ಸ್ವತಃ ಪ್ರಥಮ್ ಮತ್ತು ಅವರ ತಂದೆ ಮಲ್ಲಣ್ಣ 'ಓನ್ ಇಂಡಿಯಾ ಕನ್ನಡ'ದ ಜೊತೆ ಮಾತನಾಡಿದ್ದಾರೆ. ತಮ್ಮ ಲವ್ ಸ್ಟೋರಿ ಬಗ್ಗೆ ಹೆಚ್ಚಿನ ವಿಷಯ ಹೇಳದಿದ್ದರು ಪ್ರಥಮ್ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.'ನಮ್ಮ ಪ್ರೇಮಾಂಕುರವಾಗಿ 6 ತಿಂಗಳಾಗಿದೆ..' 'ನಮ್ಮದು ನಿಷ್ಕಲ್ಮಶ ಮನೋಭಾವದ ಪ್ರೇಮ..' ಎಂದು ಪ್ರಥಮ್ ನಗುತ್ತಾ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...ನಾನು ಆಕೆಯ ಹೆಸರು ಹೇಳಲಾರೆ... ಅವಳದ್ದು ಸಿನಿಮಾ ಫೀಲ್ಡ್ ಅಲ್ಲ. ಅವಳು ಇಂಜಿನಿಯರ್ ಪದವೀಧರೆ. ನಾವು ದಿನವೂ ಫೋನ್ ಮಾಡಿ ಮಾತನಾಡುತ್ತೇವೆ. ಅವಳು ನನ್ನ ಕಷ್ಟಕ್ಕೆ ದನಿಯಾಗಿದ್ದಾಳೆ. ಅವಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವಳು ಕೂಡ ನನ್ನನ್ನು ಇಷ್ಟಪಡುತ್ತಾಳೆ.'' ಎಂದು ಪ್ರಥಮ್ ತಮ್ಮ ಪ್ರೀತಿಯನ್ನು ವಿವರಿಸಿದರು
bigg boss winner pratham satys about his love story BigBoss star celebrity Olle Hudga Pratham confirms that he is contesting elections. but he refuses to say from witch party he is going to contest. watch this video