Actor and director Pratham met Chief Minister 'Siddaramaiah'. Pratham has appealed to the justice to the 'Danamma' family. Actor Pratham Famous Celebrities by Big Boss Reality Show
ನಟ ಹಾಗೂ ನಿರ್ದೇಶಕ ಪ್ರಥಮ್ ಒಂದಲ್ಲಾ ಒಂದು ವಿಚಾರದಿಂದ ಹಾಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಹೊಸ ವರ್ಷ ಪ್ರಾರಂಭದಲ್ಲೇ ನಟ ಪ್ರಥಮ್ ಒಳ್ಳೆ ಸುದ್ದಿಯನ್ನ ಅವರ ಅಭಿಮಾನಿಗಳಿಗೆ ನೀಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ಗಳ ನ್ಯೂ ಇಯರ್ ಅಂದರೆ ಚೆನ್ನಾಗಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಾರೆ ಅನ್ನುವ ಊಹೆಗಳಿರುತ್ತವೆ. ಆದರೆ ಪ್ರಥಮ್ ನಾನು ಎಲ್ಲರಿಗಿಂತಲೂ ಭಿನ್ನ ಎನ್ನುವುದನ್ನು ಈ ಮೂಲಕ ನಿರೂಪಿಸಿದ್ದಾರೆ.ಹೊಸ ವರ್ಷ ಒಂದೊಳ್ಳೆ ಕೆಲಸ ಮಾಡೋಣ ಎನ್ನುವ ಪ್ಲಾನ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದಾರೆ. ಪ್ರಥಮ್ ಸಿ ಎಂ ಅವರನ್ನ ಮೀಟ್ ಮಾಡಿರುವುದು ಅವರ ಸಿನಿಮಾದ ವಿಚಾರಕ್ಕೆ ಅಲ್ಲ. ವಿಜಯಪುರದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕುಮಾರಿ ದಾನಮ್ಮ ಅವರಿಗಾಗಿ.ದಾನಮ್ಮ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಕೊಡಬೇಕು ಹಾಗೂ ಈ ವಿಚಾರ ನ್ಯಾಯಾಲಯದಲ್ಲಿ ಆದಷ್ಟು ಬೇಗ ಇತ್ಯರ್ಥವಾಗಬೇಕು ಮತ್ತು ದಾನಮ್ಮರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಪ್ರಥಮ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.