''ಬಿಗ್ ಬಾಸ್' ನೀಡಿದ್ದ ಬಲೂನ್ ಟಾಸ್ಕ್ ನಲ್ಲಿ ಹುಡುಗಿಯರ ಜೊತೆ ಸಮೀರಾಚಾರ್ಯ ನಡೆದುಕೊಂಡ ರೀತಿ ಸರಿ ಇರಲಿಲ್ಲ'' ಎಂದು ಸಮೀರಾಚಾರ್ಯ ವಿರುದ್ಧ ಅನುಪಮಾ ಗೌಡ ಗಂಭೀರ ಆರೋಪ ಮಾಡಿದ್ದರು. ಜೊತೆಗೆ ''ಹೆಣ್ಮಕ್ಳು ಮೈ ಮುಟ್ಟುವುದು ಅಂದ್ರೆ ನನಗೆ ಆಗಲ್ಲ'' ಎಂದು ಜಗನ್ ಕೂಡ ಸಮೀರಾಚಾರ್ಯ ಮೇಲೆ ಜೋರು ಮಾಡಿದ್ದರು. ಇಂತಹ ಗಂಭೀರ ಆರೋಪಗಳನ್ನು ಕೇಳಿಸಿಕೊಂಡ ಬಳಿಕ ಸಮೀರಾಚಾರ್ಯ ಸಿಕ್ಕಾಪಟ್ಟೆ ಬೇಸರಗೊಂಡಿದ್ದರು. ಅಷ್ಟಕ್ಕೂ, ಸಮೀರಾಚಾರ್ಯ ವಿರುದ್ಧ ನಟಿ ಅನುಪಮಾ ಗೌಡ ಮಾಡಿದ ಆರೋಪ ಸರಿಯೇ.? ಈ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದು ಏನು.''ಅನುಪಮಾ ಅವರೇ, ಬಲೂನ್ ಟಾಸ್ಕ್ ನಲ್ಲಿ ನಿಮಗೆ ಏನಾದರೂ ಕನ್ ಫ್ಯೂಶನ್ ಆಯ್ತಾ.? ಸಮೀರಾಚಾರ್ಯ ಹುಡುಗಿಯರ ಜೊತೆ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ, ಕಣ್ಣಾರೆ ನೋಡಿದ್ದೇನೆ ಅಂತ ಹೇಳಿದ್ರಿ'' ಎಂದು ಅನುಪಮಾ ಗೌಡರನ್ನ ಸುದೀಪ್ ಪ್ರಶ್ನಿಸಿದರು.